ಹುಬ್ಬಳ್ಳಿ : ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಗದ್ದಲ ಆರಂಭಿಸಿತ್ತು. ಈ ವೇಳೆ ಬಿಜೆಪಿ ಸಹ ಪ್ರತಿಭಟನೆಗಳಿಯಿತು. ಇದರ ಪರಿಣಾಮ ಕಲಾಪ ಮುಂದೂಡಬೇಕಾಯಿತು ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ನಿನ್ನೆ ನಡೆದ ಘಟನೆ ಯಾರಿಂದ ಶುರುವಾಯಿತು ಎಂದು ವಿವರಿಸಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಗಲಾಟೆ ಜೋರಾದ ನಂತರವೇ ಕಲಾಪ ಮುಂದೂಡಲಾಯಿತು. ಬಳಿಕ ಸದನದ ಮೈಕ್, ಆಡಿಯೋ ವಿಡಿಯೋ ಎಲ್ಲವೂ ಬಂದ್ ಮಾಡಿದ್ದರು. ಆದರೆ ಇದಾದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಬಂದು ನನಗೆ ‘ಪ್ರಾಸ್ಟಿಟ್ಯೂಟ್’ ಅಂತಾ ಕರೆದಿದ್ದಾರೆ ಎಂದರು. ಪದೇಪದೆ ಆ ಪದ ಬಳಕೆ ಮಾಡಿದ್ದಾರೆ ಎಂದು ದೂರಿದರು. ನಾನು ಆಡಿಯೋ ವಿಡಿಯೋ ಎಲ್ಲವನ್ನೂ ಚೆಕ್ ಮಾಡಿದೆ. ಹಾಗೆ ಬೈದ ಬಗ್ಗೆ ಆಗ ಯಾವುದೇ ದಾಖಲೆ ಸಿಕ್ಕಿಲ್ಲ.
ಇದನ್ನೂ ಓದಿ: ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಪೋಟ : ಓರ್ವ ಸಾವು, 7 ಜನರಿಗೆ ಗಾಯ !
ಆದರೆ ಕೆಲ ಮಾಧ್ಯಮಗಳಲ್ಲಿ ಇದರ ಕುರಿತು ಬಂದಿದೆ. ನಾನು ಕೂಡ ಲಕ್ಷ್ಮೀ ಹೆಬ್ಬಳ್ಕರ್ ಹಾಗೂ ಸಿ.ಟಿ ರವಿಯನ್ನು ಕರೆದು ಮಾತನಾಡಿದ್ದೇನೆ. ಇದೆಲ್ಲವನ್ನು ಇಲ್ಲಿಗೆ ಮುಗಿಸೋಣ ಎಂದು ಹೇಳಿದೆ. ಆದರೆ ಸಿ.ಟಿ ರವಿ ನಾನು ಪ್ರಸ್ಟ್ರೇಟ್ ಆಗಿದ್ದೀರ ಎಂದು ಹೇಳಿದೆ, ಅದನ್ನು ಅವರಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಿ,ಟಿ ರವಿ ಹೇಳಿದರು.
ಸದನದಲ್ಲಿ ಈ ರೀತಿಯಾಗಿರುವುದು ಇದೆ ಮೊದಲು. ಸದನದಲ್ಲಿ ಪೊಲೀಸರು ಬರಲು ಅನುಮತಿ ನೀಡಿಲ್ಲ. ಪೊಲೀಸರು ಅನುಮತಿ ಕೇಳಿದರು ಕೂಡ ನಾನು ಅನುಮತಿಯನ್ನು ತಿರಸ್ಕರಿಸಿದೆ ಎಂದು ಹೇಳಿದರು.