ಬೆಂಗಳೂರು : ಯುಐ ಸಿನಿಮಾ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಯುನಿವರ್ಸಲ್ ಸಬ್ಜೆಕ್ಟ್ನ ಈ ಸಿನಿಮಾ ನೊಡೋಕೆ ಕನ್ನಡಿಗರು ಮಾತ್ರವಲ್ಲ ಇಡೀ ವಿಶ್ವವೇ ಕಾದು ನಿಂತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಿದ್ದು , ಸಿನಿಮಾ ಬಗ್ಗೆ ಎಲ್ಲೆಡೆ ಕ್ರೇಜ್ ಹೆಚ್ಚಾಗಿದೆ.
ಒಂಭತ್ತು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ “UI” ಚಿತ್ರ ಡಿಸೆಂಬರ್ 20 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ 2000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನೋಡಲು ಉಪೇಂದ್ರ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಪೋಸ್ಟರ್, ಹಾಡು, ಟೀಸರ್ ಮೂಲಕ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ವೀಕ್ಷಿಸಲು ಉಪೇಂದ್ರ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಡಿ.20ಕ್ಕೆ ಕೇವಲ ಒಂದೇ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಸಿನಿಪ್ರಿಯರು ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗಳತ್ತ ಮುಖಮಾಡಿದ್ದಾರೆ.
ಇದನ್ನೂ ಓದಿ : ನನ್ನ ಸಾಲಕ್ಕಿಂತ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ : ವಿಜಯ್ ಮಲ್ಯ
ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಮಾರ್ನಿಂಗ್ ಶೋಗಳ ಟಿಕೆಟ್ಗಳು ಬಲು ಲಘು-ಬಗೆಯಿಂದ ಬಿಕರಿಯಾಗುತ್ತಿದೆ. ಹಲವು ಚಿತ್ರಮಂದಿರಗಳು ‘ಯುಐ’ ಸಿನಿಮಾದ ಮಾರ್ನಿಂಗ್ ಶೋ ಪ್ರದರ್ಶಿಸುತ್ತಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋ ಟಿಕೆಟ್ಗಳು ಮಾರಾಟವಾಗಿಬಿಟ್ಟಿವೆ.
ಮುಂಜಾನೆ 6 ಗಂಟೆಗೆ ಆರಂಭವಾಗಲಿದೆ ‘ಯುಐ’ ಅಬ್ಬರ !
ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ‘ಯುಐ’ ಸಿನಿಮಾದ ಮಾರ್ನಿಂಗ್ ಶೋ ಪ್ರದರ್ಶನವಾಗುತ್ತಿದೆ. ಬೆಳಿಗ್ಗೆ 6:30 ಕ್ಕೆ ಕೆಲವೆಡೆ 6:15ಕ್ಕೆ ಶೋ ಪ್ರದರ್ಶನಗೊಳ್ಳುತ್ತಿದೆ. ಮಾರ್ನಿಂಗ್ ಶೋ ಪ್ರದರ್ಶಿಸುತ್ತಿರುವ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾದ ಟಿಕೆಟ್ಗಳು ಈಗಾಗಲೇ ಮಾರಾಟವಾಗಿವೆ. ಕೆಲವು ಶೋಗಳು ಈಗಾಗಲೇ ಹೌಸ್ ಫುಲ್ ಸಹ ಆಗಿವೆ. ‘ಯುಐ’ ಸಿನಿಮಾದ ರಾತ್ರಿಯ ಶೋಗಳು ಸಹ ಕೆಲವು ಚಿತ್ರಮಂದಿರಗಳಲ್ಲಿ ಎರಡು ದಿನ ಮುಂಚಿತವಾಗಿಯೇ ಬುಕ್ ಆಗುತ್ತಿವೆ.
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಆಂಧ್ರ ಹಾಗೂ ತೆಲಂಗಾಣದಲ್ಲೂ ಯು ಐ ಸಿನಿಮಾದ ಬುಕ್ಕಿಂಗ್ಗೆ ಪಾಸಿಟಿವ್ ರೆಸ್ಪಾನ್ಸ್ ಬರ್ತಾಯಿತ್ತು ತಮಿಳುನಾಡಿನಲ್ಲೂ ಫಾಸ್ಟ್ ಫಿಲ್ಲಿಂಗ್ಯಿದೆ .. ಒಟ್ಟಾರೆಯಾಗಿ ವಿಭಿನ್ನ ಪ್ರಯತ್ನದ ಮೂಲಕ ತೆರೆಯ ಮೇಲೆ ಬರ್ತಾಯಿರೋ ಕನ್ನಡದ ಬುದ್ದಿವಂತನನ್ನ ಅದ್ದೂರಿಯಾಗಿ ಸ್ವಾಗತಿಸಲು ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಂತಿದೆ.