ಬಳ್ಳಾರಿ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ರೇಣುಕಾ ಪೂಜಾರಿಯಂಬ ತೃತೀಯಲಿಂಗಿ ಅರೆಕಾಲಿಕ ಕನ್ನಡ ಪ್ರಾಧ್ಯಾಪಕಿಯಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಹೆಗ್ಗಲಿಕೆಗೆ ಪಾತ್ರರಾಗಿದ್ದಾರೆ. ಪುರುಷನಾಗಿ ಜನಿಸಿ ಹೆಣ್ಣಾಗಿ ಬದಲಾಗಿ ಸಮಾಜದಲ್ಲಿ ಅವಮಾನಿಸಲ್ಪಟ ಒಬ್ಬ ತೃತೀಯ ಲಿಂಗಿಯೂ ಶಿಕ್ಷಣದಿಂದ ತನ್ನ ಹಣಬರಹವನ್ನೆ ಬದಲಿಸಿಕೊಂಡಿದ್ದಾಳೆ.
ಇದನ್ನೂ ಓದಿ : ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ದರ್ಶನ್ !
ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ರೇಣುಕಾ ಪೂಜಾರಿ ಅವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕಿಯಾಗಿ ಡಿಸೆಂಬರ್ 10 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳಮುಖಿಯೊಬ್ಬರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು. ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಮೂವರು ಮಂಗಳಮುಖಿಯರು ರಾಜ್ಯದ ವಿವಿದೆಡೆ ಸೇವೆ ಸಲ್ಲಿಸುತ್ತಿದ್ದರಾದರೂ ಉನ್ನತ ಶಿಕ್ಷಣ ಪಡೆದು ಪ್ರಾಧ್ಯಾಪಕಿಯಾಗಿದ್ದು ಇದೇ ಪ್ರಥಮ.
ರೇಣುಕಾ ಪೂಜಾರಿ ಅವರು ಮೂಲತಃ ಬಳ್ಳಾರಿ ಜಿಲ್ಲೆ ಕುರುಗೋಡು ಪಟ್ಟಣದವರು. ತಿಪ್ಪಮ್ಮ ಮತ್ತು ಮಲ್ಲಯ್ಯ ದಂಪತಿಗಳ ಇಬ್ರು ಮಕ್ಕಳಲ್ಲಿ ಮೊದಲು ಮಲ್ಲೇಶ್ ಮತ್ತು ಎರಡನೆಯವನು ರಾಜಶೇಖರ್. ಹಿರಿಯ ಮಗನಾಗಿದ್ದ ಮಲ್ಲೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿ, ಪದವಿ ಪೂರ್ವ ಶಿಕ್ಷಣವನ್ನು ಬಳ್ಳಾರಿಯ ಸರ್ಕಾರಿ ಪದವಿ ಪೂರ್ವ (ಮುನ್ಸಿಪಲ್) ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಪದವಿ ಶಿಕ್ಷಣವನ್ನು ಕುರುಗೋಡಿನಲ್ಲಿ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಅಭ್ಯಾಸ ಮಾಡಿದ್ದಾರೆ.
ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ ರೆಗ್ಯುಲರ್ ಆಗಿದ್ದು, ವಿದ್ಯಾರ್ಥಿಯಾಗಿರುವ ವೇಳೆ ದೇಹದಲ್ಲಿ ನೈಸರ್ಗಿಕ ಬದಲಾವಣೆ ಆದ ಹಿನ್ನೆಲೆಯಲ್ಲಿ ಮಂಗಳಮುಖಿಯಾಗಿ ಬದಲಾಗಿ ತನ್ನಹೆಸರನ್ನು ಕೆ.ಎನ್.ರೇಣುಕಾ ಪೂಜಾರಿಯಾಗಿ ಬದಲಿಸಿಕೊಂಡ್ರು.
ತೃತೀಯ ಲಿಂಗಿಗಳು ಎಂದರೆ ಸಮಾಜದಲ್ಲಿ ಅಸಢ್ಯ ಎಂದು ಭಾವಿಸುತ್ತಾರೆ. ತೃತೀಯಲಿಂಗಿಯಾಗಿ ಬದಲಾಗಿದ್ರಿಂದ ಸಾರ್ವಜನಿಕರು, ಬಂಧುಗಳು ಮನೆಯ ಅಕ್ಕಪಕ್ಕದವರು ನಮ್ಮನ್ನು ತಾತ್ಸರ ಮನೋಭಾವನೆಯಿಂದ ನೋಡಲಾರಂಭಿಸಿದರು. ಇದಕ್ಕೆಲ್ಲ ಕಾರಣ ತೃತೀಯ ಲಿಂಗಿಗಳಿಗೆ ಕೆಲಸ ಸಿಗದೇ ಭಿಕ್ಷಾಟನೆ ಮಾಡುವುದು, ಲೈಂಗಿಕ ಕಾರ್ಯಕರ್ತರಾಗಿಕೆ ಲಸ ಮಾಡುವುದ್ರಿಂದ ಸಮಾಜದಲ್ಲಿ ನೋಡುವ ರೀತಿಯೇ ಬೇರೆಯಿತ್ತು.
ನನ್ನ ಜೀವನಕ್ಕೆ ವಿಧ್ಯಾಭ್ಯಾಸವನ್ನು ಪಡೆದು ಹಣೆಬರವನ್ನು ಬದಲಿಸಿಕೊಳ್ಳಬೇಕು ಎಂದು ನಿರ್ಧರಿಸಿದ ರೇಣುಕಾ ಪೂಜಾರ್ ವಿಧ್ಯಾಬ್ಯಾಸದಲ್ಲಿ ಶೇ.70ರಷ್ಟು ಅಂಕಗಳನ್ನು ಪಡೆದಿದ್ರು. ತನ್ನ ವಿಧ್ಯಾಭ್ಯಾಸಕ್ಕಾಗಿ ತಕ್ಕ ಅವಕಾಶಕ್ಕಾಗಿ ಕಾಯುತ್ತಿದರು. ಅಷ್ಟರಲ್ಲಿ ವಿಶ್ವವಿದ್ಯಾಲಯದ ಪೂರ್ಣಕಾಲಿಕ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ತು. ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂಬ ಆಸೆ ಹೊತ್ತು ರೇಣುಕಾ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.ರೇಣುಕಾಳ ಜೀವನ ಇತರರಿಗೆ ಪ್ರೇರಣೆಯಾಗಿದೆ.