ಬೆಂಗಳೂರು : ಸಂಚಾರಿ ಪೊಲೀಸರು ಚಾಲಕನಿಗೆ ಲಾಠಿ ಏಟು ನೀಡಿದ್ದಕ್ಕೆ ಕೆರಳಿದ ಚಾಲಕನೊರ್ವ ನಡುರಸ್ತೆಗೆ ಅಡ್ಡಲಾಗಿ ಲಾರಿಯನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದು. ಲಾರಿ ಚಾಲಕನ ಪ್ರತಿಭಟನೆಯಿಂದ ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪ್ರತಿಭಟನೆ ನಡೆಸುವಂತಾಯಿತು.
ಇದನ್ನೂ ಓದಿ : ಪೊಲೀಸರಿಂದ ಹಲ್ಲೆ : ರಸ್ತೆಗೆ ಅಡ್ಡಲಾಗಿ ಲಾರಿ ನಿಲ್ಲಿಸಿ ಪ್ರತಿಭಟನೆಗೆ ಕುಳಿತ ಚಾಲಕ !
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ ನಡೆದಿದ್ದು. ಸಂಚಾರಿ ಪೊಲೀಸರು ನೀಡಿದ ಲಾಠಿ ಏಟಿನಿಂದ ಕೆರಳಿದ ಲಾರಿ ಚಾಲಕನೊಬ್ಬ ನಡು ರಸ್ತೆಗೆ ಅಡ್ಡಲಾಗಿ ತನ್ನ ಲಾರಿಯನ್ನು ನಿಲ್ಲಿಸಿದ್ದು. ರಸ್ತೆಯಲ್ಲಿಯೆ ಪ್ರತಿಭಟನೆಗೆ ಕುಳಿತಿದ್ದಾನೆ. ಪೊಲೀಸರು ಎಷ್ಟೆ ಮನವೊಲಿಸಲು ಪ್ರಯತ್ನಿಸಿದರು ಕೂಡ ಲಾರಿ ಚಾಲಾಕ ತನ್ನ ಲಾರಿಯನ್ನು ತೆಗೆಯಲು ಒಪ್ಪದೆ ದೊಡ್ಡ ಹೈಡ್ರಾಮವೆ ಸೃಷ್ಟಿಯಾಗಿದೆ. ಈ ಹೈಡ್ರಾಮದ ನಡುವೆ ಟ್ರಾಫಿಕ್ನಲ್ಲಿ ಸಿಲುಕಿದ ವಾಹನ ಸವಾರರು ಹೈರಾಣಾಗಿದ್ದಾರೆ ಎಂದು ತಿಳಿದು ಬಂದಿದೆ.