Home Big Stories ಕಾಂಗ್ರೆಸ್ ಸಂವಿಧಾನದ ಮೌಲ್ಯಗಳನ್ನು ಒಡೆದು ಹಾಕುತ್ತಿದೆ : ಅಮಿತ್​ ಶಾ

ಕಾಂಗ್ರೆಸ್ ಸಂವಿಧಾನದ ಮೌಲ್ಯಗಳನ್ನು ಒಡೆದು ಹಾಕುತ್ತಿದೆ : ಅಮಿತ್​ ಶಾ

0
ಕಾಂಗ್ರೆಸ್ ಸಂವಿಧಾನದ ಮೌಲ್ಯಗಳನ್ನು ಒಡೆದು ಹಾಕುತ್ತಿದೆ : ಅಮಿತ್​ ಶಾ

ದೆಹಲಿ : ನಿನ್ನೆ ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದ ಅಮಿತ್​ ಶಾ ಅಂಬೇಡ್ಕರ್​​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್​ ಆಕ್ರೋಶ ವ್ಯಕ್ತಪಡಿಸಿದ್ದು. ದೇಶಾದ್ಯಂತ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ​ ಅಮಿತ್​ ಶಾ ಹೇಳಿಕೆ ಕಿಡಿಕಾರುತ್ತಿವೆ.

ಇದಕ್ಕೆ ಪ್ರತಿಯಾಗಿ ಇಂದು ಸಂಜೆ ಸುದ್ದಿಗೋಷ್ಟಿ ಮಾಡಿದ ಗೃಹ ಸಚಿವ ಅಮಿತ್​ ಷಾ ‘ ಕಾಂಗ್ರೆಸ್ ಸಂವಿಧಾನದ ಮೌಲ್ಯಗಳನ್ನು ಒಡೆದು ಹಾಕುವ ಪ್ರಯತ್ನ ಮಾಡುತ್ತಿದೆ. ಇದನ್ನು ಬಿಜೆಪಿಯ ಬಹುತೇಕ ನಾಯಕರು ದಾಖಲೆಗಳೊಂದಿಗೆ ಉತ್ತರಿಸಿದ್ದಾರೆ. ಆದರೆ ಕಾಂಗ್ರೆಸ್​ ಅವಮಾನ ಮಾಡುತ್ತಲೆ ಇದೆ. ಕಾಂಗ್ರೆಸ್​ ಸಾವರ್ಕರ್​ ಬಗ್ಗೆ, ನಾರಿ ಶಕ್ತಿ ಬಗ್ಗೆ, ಸೈನಿಕರ ಕುರಿತು, ಅಪಮಾನ ಮಾಡುತ್ತಿದೆ. ಇದೇ ರೀತಿಯಾಗಿ ಸತ್ಯಕ್ಕೆ ಸುಳ್ಳು ಸೇರಿಸಿ ತಿರುಚುವ ಪ್ರಯತ್ನ ಮಾಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್​ನವರು ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿ ಮನೆಗೆ ಕಳಿಸಿದ್ರು, ನೆಹರೂ ಅವರೆ ಬರೆದಿರುವ ಪುಸ್ತಕದಲ್ಲಿ ಒಂದು ಪತ್ರದ ಬಗ್ಗೆ ಉಲ್ಲೇಖ ಆಗಿದೆ. ಅದರಲ್ಲಿ ಅಂಬೇಡ್ಕರ್ ಜನ್ಮ ಸ್ಥಳದಲ್ಲಿ ಸ್ಮಾರಕ ಕುರಿತು ಪ್ರಶ್ನೆ ಬಂದಾಗ. ನೆಹರು ಯಾವುದೇ ಪ್ರತಿಕ್ರಿಯೆ ನೀಡದೆ ನಿರಾಕರಿಸಿದ್ದಾರೆ.  ಇದನ್ನು ಸ್ವತಃ ನೆಹರು ಕುಟುಂಬದವರೇ ಒಪ್ಪಿಕೊಂಡಿದ್ದಾರೆ, ಇದಕ್ಕಿಂದ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಅಪಮಾನ ಇನ್ನೊಂದಿಲ್ಲ ಎಂದು ಕಾಂಗ್ರೆಸ್​ ಮೇಲೆ ವಾಗ್ದಾಳಿ ನಡೆಸಿದರು.

ಅಂಬೇಡ್ಕರ್​ ಸಿದ್ದಾಂತವನ್ನು ನಾನು ಅಳವಡಿಸಿಕೊಂಡಿದ್ದೇನೆ !

ಅಂಬೇಡ್ಕರ್​ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಮಾತನಾಡಿದ ಅಮಿತ್​ ಶಾ ‘ ಅಂಬೇಡ್ಕರ್ ಸಿದ್ದಾಂತ ಜೊತೆಗೆ ಬಿಜೆಪಿ ಯಾವಾಗಲೂ ಇದೆ. ಅಂಬೇಡ್ಕರ್ ಸಿದ್ದಾಂತಗಳನ್ನು ನಾನು ಕೂಡ ಅಳವಡಿಸಿಕೊಂಡಿದ್ದೇನೆ. ಆದರೆ ನಾನು ಕೊಟ್ಟ ಹೇಳಿಕೆಯನ್ನು ಕಾಂಗ್ರೆಸ್ ಹಿಂದೆ ಮುಂದೆ ತಿರುಚುವ ಕೆಲಸ ಮಾಡುತ್ತಿದೆ. ಖರ್ಗೆ ಮತ್ತು ರಾಹುಲ್​ ಗಾಂಧಿ ಒತ್ತಡಕ್ಕೆ ಸಿಲುಕಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್​ನಲ್ಲಿರುವವರು ಬೆಂಬಲಿಸಬಾರದು ಎಂದು ಹೇಳಿದರು.

LEAVE A REPLY

Please enter your comment!
Please enter your name here