ಕೋಲಾರ : ನಗರದ ಮುಳಬಾಗಿಲಿನಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು. ದ್ವಿಚಕ್ರ ವಾಹನ ಮತ್ತು ಬೊಲೋರೊ ವಾಹನದ ನಡುವೆ ಅಪಘಾತವಾಗಿ ಐವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಕೋಲಾರದ ಮುಳಬಾಗಿಲಿನ, ವಡ್ಡಹಳ್ಳಿಯ ಕೋನಂಗುಂಟೆ ಬಳಿ ಘಟನೆ ನಡೆದಿದ್ದು. ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದ ಬೊಲೋರೋ ಚಾಲಕ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಐವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಪ್ರಾಶುಂಪಾಲರ ಕೊಠಡಿ ಮುಂದೆಯೆ ಕುಸಿದು ಬಿದ್ದ ವಿಧ್ಯಾರ್ಥಿನಿ ಸಾವು !
ಮೃತರನ್ನು ನಾಗನಹಳ್ಳಿ ಗ್ರಾಮದ ಗಾಯಿತ್ರಮ್ಮ (48), ಕೋನಂಗುಂಟೆ ಗ್ರಾಮದ ವೆಂಕಟರಮಣಪ್ಪ, ಪತ್ನಿ ಆಲುವೇಲಮ್ಮ, ರಾದಪ್ಪ ಎಂದು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.