ಬೆಳಗಾವಿ : ರಾಜಕಾರಣದಲ್ಲಿ ಯಾರು ಸ್ನೇಹಿತರಲ್ಲ, ಯಾರೂ ಶತ್ರುಗಳಲ್ಲ ಎಂಬುದು ಬಹುಷಃ ಸತ್ಯವಾದ ಮಾತೆ ಆಗಿದೆ. ಹೌದು ವಕ್ಷ್ ವಿಚಾರದಲ್ಲಿ ಹಾವು ಮುಂಗುಸಿಯ ರೀತಿಯಲ್ಲಿ ಟಾಕ್ ಫೈಟ್ ಮಾಡುತ್ತಿದ್ದ ಜಮೀರ್ ಮತ್ತು ಯತ್ನಾಳ್ ಜೊತೆಯಾಗಿ ಕಾಣಿಸಿಕೊಂಡಿದ್ದು. ಜಮೀರ್ ಆಹ್ವಾನದ ಮೇರೆಗೆ ಯತ್ನಾಳ್ ಜಮೀರ್ ಅವರ ಕಛೇರಿಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ :
ರಾಜ್ಯದಲ್ಲಿ ಕಳೆದ ತಿಂಗಳು ವಕ್ಷ್ ವಿಚಾರದ ಕಾವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು.ಈ ವೇಳೆ ವಕ್ಷ್ ಆಸ್ತಿಯನ್ನು ಜಮೀರ್ ಆದೇಶದ ಮೇರೆಗೆ ಕಬಳಿಸಲಾಗುತ್ತಿದೆ ಎಂದು ಯತ್ನಾಳ್ ಅವರು ಜಮೀರ್ ಅವರ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರು. ದಿನ ಪ್ರತಿ ಜಮೀರ್ಗೆ ಬೈಯುತ್ತಿದ್ದ ಯತ್ನಾಳ್ ಇಂದು ಜಮೀರ್ ಅವರ ಕಛೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಜಮೀರ್ ಊಟಕ್ಕೆ ಆಹ್ವಾನಿಸಿದ್ದ ಹಿನ್ನಲೆ ಬಸನಗೌಡಪಾಟೀಲ್ ಯತ್ನಾಳ್ ಇಂದು ಸುವರ್ಣಸೌದದ ಜಮೀರ್ ಅವರ ಕಛೇರಿಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.