Wednesday, December 18, 2024

ವಿಜಯೇಂದ್ರ-ಯತ್ನಾಳ್​ ಫ್ರೆಂಡ್​ಶಿಪ್​ : ಸದನದಲ್ಲಿ ಪರಸ್ಪರ ಕೈಮುಗಿದುಕೊಂಡ ರೆಬಲ್ಸ್​​

ಬೆಳಗಾವಿ : ಜಿಲ್ಲೆಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದ್ದು. ಬಿಜೆಪಿಯ ಬಂಡಾಯ ನಾಯಕ ಬಸನಗೌಡಪಾಟೀಲ್​ ಯತ್ನಾಳ ಮತ್ತು ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಪರಸ್ಪರ ಕೈಮುಗಿದು ಕುಶಲೋಪಚಾರ ವಿಚಾರಿಸಿಕೊಂಡಿದ್ದಾರೆ.

ಕಳೆದ ಕೆಲವು ತಿಂಗಳಿಂದ ಬಿಜೆಪಿಯ ಒಳಜಗಳ ಬೀದಿಗೆ ಬಂದಿದ್ದು. ಯತ್ನಾಳ್​ ಮತ್ತು ಬಣ ವಿಜಯೇಂದ್ರರನ್ನು ರಾಜ್ಯಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪಟ್ಟು ಹಿಡಿದು ರೆಬಲ್ಸ್​ ನಾಯಕರಾಗಿ ಗುರುತಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ವಿಜಯೇಂದ್ರ ಬಣದ ನಾಯಕರು ಕೂಡ ಯತ್ನಾಳ್ ವಿರುದ್ದ ಹೇಳಿಕೆ ನೀಡುತ್ತಿದ್ದರು. ಈ ಒಳಜಗಳ ಹೈಕಮಾಂಡ್​ ಅಂಗಳನ್ನು ತಲುಪಿ ಯತ್ನಾಳ್​ಗೆ ನೋಟಿಸ್​ ನೀಡುವ ಹಂತಕ್ಕೆ ತಲುಪಿತ್ತು.

ಆದರೆ ನೋಟಿಸ್​ ಪಡೆದ ಯತ್ನಾಳ್ ದೆಹಲಿ ಭೇಟಿಯಾಗುತ್ತಿದ್ದಂತೆ ವಿಜಯೇಂದ್ರ ಅವರ ವಿರುದ್ದ ನೀಡುತ್ತಿದ್ದ ಹೇಳಿಕೆಗಳು ನಿಂತುಹೋಗಿದ್ದವು. ಆದರೆ ಇಂದು ಸದನದಲ್ಲಿ ಇಬ್ಬರು ನಾಯಕರು ಪರಸ್ಪರ ಕೈಮುಗಿದು ಕುಶಲೋಪಚಾರ ವಿಚಾರಿಸಿಕೊಂಡಿರುವ ಪೋಟೋ ವೈರಲ್​ ಆಗಿದ್ದು. ಬಿಜೆಪಿಯಲ್ಲಿನ ಭಿನ್ನಮತ ಶಮನವಾಗಿದೆಯೆ ಎಂಬ ಕುತೂಹಲ ಮೂಡಿಸುತ್ತಿದೆ.

RELATED ARTICLES

Related Articles

TRENDING ARTICLES