ಕೋಲಾರ : ಪ್ರೀತಿಯಿಂದ ಸಾಕಿದ್ದ ಎತ್ತಿಗೆ ಹುಟ್ಟುಹಬ್ಬವನ್ನು ಆಚರಿಸಿ, ಊರಿಗೆ ಊಟ ಹಾಕಿಸಿರುವ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದ್ದು. ಹಳ್ಳಿಕಾರ್ ತಳಿಯ ಹಸುವಿಗೆ ಆರನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೋಲಾರದ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದ ರೈತ ಮಂಜುನಾಥ್ ತನ್ನ ಎತ್ತಿಗೆ ಹುಟ್ಟುಹಬ್ಬವನ್ನು ಆಚರಿಸಿದ್ದು. ಗ್ರಾಮದಲ್ಲಿ ಕೇಕ್ ಕತ್ತರಿಸಿ, ನೂರಾರು ಜನರಿಗೆ ಊಟ ಹಾಕಿಸುವ ಮೂಲಕ ಅದ್ದೂರಿ ಬರ್ತಡೇ ಆಚರಿಸಿದ್ದಾರೆ. ಕಳೆದ ಆರು ವರ್ಷಗಳಿಂದಲೂ ಎತ್ತಿಗೆ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರೀತಿಯ ಎತ್ತಿಗೆ ವಾಯುಪುತ್ರ ಎಂದು ಹೆಸರಿಟ್ಟಿರುವ ರೈತ ಮಂಜುನಾಥ್. ವಿವಿಧ ರಾಸುಗಳ ಓಟದಲ್ಲಿಯೂ ಭಾಗವಹಿಸಿದ್ದಾರೆ. ಇಲ್ಲಿಯವರೆಗೆ ಆಂಧ್ರ, ಕರ್ನಾಟಕ, ತಮಿಳುನಾಡು ವಿವಿಧೆಡೆ ರಾಸುಗಳ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಗೆದ್ದಿರುವ ಇತಿಹಾಸವನ್ನು ವಾಯುಪುತ್ರ ಎತ್ತು ಹೊಂದಿದೆ. ಅದರ ಜೊತೆಗೆ ರೈತ ಮಂಜುನಾಥ ಹಳ್ಳೀಕಾರ್ ತಳಿಯ ಹಸುವಿನ ಸಂರಕ್ಷಣೆಯಲ್ಲಿಯೂ ತೊಡಗಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.