Monday, December 16, 2024

ಜಾಮೀನು ದೊರೆತ ಖುಷಿಯಲ್ಲಿ ಬೆನ್ನು ನೋವು ವಾಸಿ : ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ದಾಸ !

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಪ್ರಮುಖ ಆರೋಪಿ ದರ್ಶನ್​ ಬಿಜಿಎಸ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು. ಯಾವುದೇ ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬೆನ್ನು ನೋವಿದೆ ಎಂದು ಮೆಡಿಕಲ್​ ಬೇಲ್ ಪಡೆದು ಬಳ್ಳಾರಿ ಜೈಲಿನಿಂದ ಹೊರಬಂದಿದ್ದ ದಾಸ ದರ್ಶನ್​ ಕಳೆದ 45 ದಿನಗಳಿಂದಲೂ ಸರ್ಜರಿ ಮಾಡಿಸಿಕೊಳ್ಳದೆ ಕಳ್ಳಾಟ ಆಡುತ್ತಿದ್ದನು. ಇದರ ಬೆನ್ನಲ್ಲೆ ದರ್ಶನ್​ಗೆ ರೆಗ್ಯುಲರ್​ ಬೇಲ್​ ಸಿಕ್ಕ ಹಿನ್ನಲೆಯಲ್ಲಿ ದರ್ಶನ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್​ಗೆ ನಟ ಧನ್ವೀರ್​, ದರ್ಶನ್​ ಪತ್ನಿ ವಿಜಯಲಕ್ಷ್ಮೀ ಸಾಥ್​ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜಿಎಸ್​​ ವೈದ್ಯರ ಸಲಹೆಯ ಮೇರೆಗೆ ಇನ್ನೂ ಮೂರು ತಿಂಗಳ ಕಾಲ ದರ್ಶನ್​ ಫಿಸಿಯೋಥೆರಪಿಗೆ ಒಳಗಾಗಲಿದ್ದು, ನಂತರ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದೆ ಎಂದರೆ ಮಾತ್ರ ಆಪರೇಶನ್​ ಮಾಡಿಸಿಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES