Monday, December 16, 2024

ಡ್ರೋನ್​​ ಪ್ರತಾಪ್​ಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ !

ತುಮಕೂರು: ಮಾಜಿ ಬಿಗ್​ಬಾಸ್​ ಸ್ಪರ್ಧಿ ಪ್ರತಾಪ್​ಗೆ ತುಮಕೂರು ನ್ಯಾಯಾಲಯ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದು. ಸೋಡಿಯಂ ಮೆಟಲ್​ ಅನ್ನು ನೀರಿನಲ್ಲಿ ಎಸೆದು ಸ್ಪೋಟಿಸಿದ್ದ ಪ್ರಕರಣದಲ್ಲಿ ಜೈಲು ವಾಸ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಪ್ರತಾಪ್ ಭಾರಿ ಪ್ರಮಾಣದ​ ಸೋಡಿಯಂ ಮೆಟಲ್​ ಅನ್ನು ನೀರಿನಲ್ಲಿ ಎಸೆದು ಭಾರಿ ಸ್ಪೋಟ ಮಾಡಿದ್ದರು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಇದಕ್ಕೆ ಪ್ರಾಣಿ ಪ್ರಿಯರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಮತ್ತು ಇದರ ಕುರಿತು ಮಧುಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಇದನ್ನೂ ಓದಿ :ಸಲೂನ್​ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರ ಹೆಡೆಮುರಿ ಕಟ್ಟಿದ ಪೊಲೀಸರು !

ಇದರ ನ್ಯಾಯಾಲಯದಿಂದ ಮೂರು ದಿನಗಳ ಪೊಲೀಸ್​ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು. ಪ್ರತಾಪ್​ನನ್ನು ಕರೆದುಕೊಂಡು ಅನೇಕ ಸ್ಥಳಗಳಲ್ಲಿ ಮಹಜರು ಮಾಡಿದ್ದರು. ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಪೊಲೀಸರು ಇಂದು ಪ್ರತಾಪ್​ನನ್ನು ಮಧುಗಿರಿ ಜೆಎಮ್​ಎಫ್​ಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ನೀಡಿದ್ದು. ಪ್ರತಾಪ್​ಗೆ ಇಂದಿನಿಂದ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಡಿಸೆಂಬರ್​ 26ರವರೆಗೂ ಡ್ರೋನ್​​ಗೆ ಜೈಲು ಖಾಯಂ ಆದಂತಾಗಿದೆ.

RELATED ARTICLES

Related Articles

TRENDING ARTICLES