ಚೆನೈ : ವಿಶ್ವ ಚಾಂಪಿಯನ್ ಆಗಿರುವ ಚೆಸ್ ಆಟಗಾರ ಡಿ. ಗುಕೇಶ್ ಅವರಿಗೆ ತಮಿಳುನಾಡು ಸರ್ಕಾರದಿಂದ 5 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಘೋಷಿಸಿದರು.
ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ ಅಡಿಯಲ್ಲಿ ಆರ್ಥಿಕ ನೆರವು ಪಡೆಯುತ್ತಿರುವ ಚೆಸ್ ಆಟಗಾರರಲ್ಲಿ ಗುಕೇಶ್ ಒಬ್ಬರು ಎಂದರು. ಗುಕೇಶ್ ಅವರಿಗೆ ಸಹಾಯ ಮಾಡುವ ಸಲುವಾಗಿ ಕಳೆದ ವರ್ಷ ರಾಜ್ಯ ಸರ್ಕಾರವು ಚೆನ್ನೈ ಗ್ರಾಂಡ್ ಮಾಸ್ಟರ್ಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಗುಕೇಶ್ ಅವರಿಗೆ 5 ಕೋಟಿ ನಗದು ಬಹುಮಾನವನ್ನು ಘೋಷಿಸಲು ನಾನು ಸಂತೋಷಪಡುತ್ತೇನೆ ಅವರ ಐತಿಹಾಸಿಕ ಗೆಲುವು ರಾಷ್ಟ್ರಕ್ಕೆ ಅಪಾರ ಹೆಮ್ಮೆ ಮತ್ತು ಸಂತೋಷ ತಂದಿದೆ. ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಎಂ. ಕೆ. ಸ್ಟಾಲಿನ್ ತಮ್ಮ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಯುವ ಆಟಗಾರನ ಸಾಧನೆಗೆ ಬೆಂಬಲ ಮತ್ತು ಪ್ರೋತ್ಸಾಹ