ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣರವರು ದೈವಾಧೀನರಾಗಿದ್ದು. ಇಂದು ಸಂಜೆ 3 ಗಂಟೆಯ ನಂತರ ಅವರ ಸ್ವಗ್ರಾಮವಾದ ಸೋಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ದೊರೆತಿದೆ. ಅವರ ಅಂತಿಮ ಸಂಸ್ಕಾರ ಹೇಗೆ ನಡೆಯಲಿದೆ ಎಂದು ವೈದಿಕ ಚಿಂತಕ ಭಾನುಪ್ರಕಾಶ್ ಶರ್ಮ ಅವರು ವಿವರಿಸಿದ್ದು ಗರುಡ ಪುರಾಣದಲ್ಲಿ ವಿವರಿಸಿರುವ ವಿಧಿವಿಧಾನದಂತೆ ಅವೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಎಸ್.ಎಂ ಕೃಷ್ಣರ ಮೃತದೇಹಕ್ಕೆ ಅವರ ಸಹೋದರನ ಪುತ್ರ ಗುರುಚರಣ್ ಮತ್ತು ಮೊಮ್ಮಗ ಅಮಾರ್ಥ್ಯ ಹೆಗ್ಡೆ ಅಗ್ನಿಸ್ಪರ್ಷ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಯಲಿದ್ದು. 15 ಮಂದಿ ವೇದ ಪಂಡಿತ ಸಮ್ಮುಖದಲ್ಲಿ ವಿಧಿವಿಧಾನನ ನಡೆಯಲಿದೆ ಎಂದು ತಿಳಿದು ಬಂದಿದೆ.
ಮಾಧ್ಯಮದೊಂದಿಗೆ ಮಾತನಾಡಿದ ವೈದಿಕ ಪಂಡಿತ ಭಾನುಪ್ರಕಾಶ್ ಗುರೂಜಿ ‘ಎಸ್ಎಂ ಕೃಷ್ಣರಿಗೆ ಆಧ್ಯಾತ್ಮದಲ್ಲಿ ಶ್ರದ್ಧೆ ಇರೋ ಕಾರಣದಿಂದ ವಿವಿಧ ವೇದ ಪುರಾಣಗಳ ಮೂಲಕ ಅಂತಿಮ ಸಂಸ್ಕಾರ ನೆರವೇರಲಿದೆ. ಪಂಜಗೌವ್ಯ ಬಳಸಿ, ಗರುಡಪುರಣದ ಶ್ಲೋಕದ ಮೂಲಕದಿಂದ ಅಗ್ನಿ ಸಂಸ್ಕಾರ ನಡೆಸಲಾಗುತ್ತದೆ. ದೇಹದ ಕಲ್ಮಶವನ್ನು, ಕೊಳೆಯನ್ನು ತೊಳೆದು 50ಕೆಜಿ ತುಪ್ಪ ಮತ್ತು 1 ಸಾವಿರ ಶ್ರೀ ಗಂಧದ ಕಟ್ಟಿಗೆ ಬಳಸಿ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ ಎಂದು ಭಾನು ಪ್ರಕಾಶ್ ಶರ್ಮ ಅವರು ತಿಳಿಸಿದರು.