ಬೆಂಗಳೂರು: ಮಾಜಿ ಸಿಎಂ, ರಾಜಕೀಯದ ಮುತ್ಸದ್ದಿ ನಾಯಕ ಎಸ್.ಎಂ ಕೃಷ್ಣರವರು ನಿಧನರಾಗಿದ್ದು. ರಾಜಕೀಯ ಗಣ್ಯರೆಲ್ಲರು ಬಂದು ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಈ ವೇಳೆ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಅವರ ದರ್ಶನ ಪಡೆದು ಮಾತನಾಡಿದ್ದು. ಅವರೊಂದಿಗಿನ ಒಡನಾಟವನ್ನು ಮತ್ತು ಅವರ ಜನಪರ ಕಾರ್ಯಗಳನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ಎಸ್.ಎಂ ಕೃಷ್ಣರ ಅಂತಿಮ ದರ್ಶನ ಪಡೆದು ಮಾತನಾಡಿದ ಪ್ರತಾಪ್ ಸಿಂಹ ‘ ಬೆಂಗಳೂರಲ್ಲಿ ಐಟಿ-ಬಿಟಿ ಬರೋಕೆ ಕಾರಣವಾಗಿದ್ದೇ ಎಸ್.ಎಂ.ಕೃಷ್ಣ ಅವರು. ಇದರಿಂದಾಗಿ ಇಂದು ಸಾವಿರಾರು ಜನರಿಗೆ ಉದ್ಯೋಗ ದೊರಕಿದೆ. ಅದಕ್ಕೆ ಇಂದು ಬೆಂಗಳುರು ಐಟಿಸಿಟಿಯಾಗಿದೆ. ಎಂದು ಹೇಳಿದರು.
‘ಎಸ್ಎಂ ಕೃಷ್ಣರವರು ವಿತ್ತೀಯ ಪಾಲಿಸಿಯನ್ನು ಜಾರಿ ಮಾಡಿದರು. 2000ದ ಇಸವಿಯಲ್ಲೆ ಪಹಣಿಯನ್ನು ಸಾಫ್ಟವೇರ್ ಮೂಲಕ ನೊಂದಯಿಸುವ ಯೋಜನೆ ತಂದರು. ಇವತ್ತು ಮೈಸೂರಿಗೆ ಅವರ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಪ್ರತಾಪ್ ಸಿಂಹ ‘ ನನಗೆ ಟಿಕೆಟ್ ಸಿಗದ ವೇಳೆ ಎಸ್.ಎಂ ಕೃಷ್ಣರು ಸಾಂತ್ವನ ಹೇಳಿದರು. ತಲೆಕಡೆಸಿಕೊಳ್ಳಬೇಡ ಅಂತಾ ಸಮಾಧಾನ ಮಾಡಿದರು. ನನಗೆ ಟಿಕೆಟ್ ಸಿಗದೆ ಇದ್ದಾಗ ಯಾರೂ ಕೂಡ ಬಂದು ಸಂತೈಸಿರಲಿಲ್ಲ. ಆದರೆ ಎಸ್.ಎಂ ಕೃಷ್ಣರವರು ನನಗೆ ಸಮಾಧಾನ ಮಾಡೋ ಕೆಲಸ ಮಾಡಿದರು. ಅವರು ಎಂದಿಗೋ ಸಭ್ಯತೆ ಮೀರಿ ಮಾತನಾಡಿಲ್ಲ. ಚಿಕ್ಕವರಾಗಲಿ ಅಥವಾ ದೊಡ್ಡವರಾಗಲಿ ಗೌರವ ಕೊಟ್ಟು ಮಾತನಾಡುತ್ತಿದ್ದರು’ ಎಂದು ಹೇಳಿದರು.