ದುಬೈ: ಭಾರತದ ಕಿರಿಯರ ಕ್ರಿಕೆಟ್ ತಂಡ ಮತ್ತೇ ಬಾಂಗ್ಲಾದೇಶದ ಎದುರು ಸೋಲನುಭವಿಸಿದ್ದು. ಏಕದಿನ ಏಷ್ಯಾಕಪ್ನಲ್ಲಿ ಸೋಲು ಅನುಭವಿಸಿದೆ ಎಂದು ಮಾಹಿತಿ ದೊರೆತಿದೆ.
ದುಬೈನ ಅಂತರ್ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ 49.1 ಓವರ್ಗಳಲ್ಲಿ 198 ರನ್ಗಳಿಸಿ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಭಾರತದ ತಂಡ ಕೇವಲ 35.2 ಓವರ್ಗಳಲ್ಲಿ 139 ರನ್ಗಳಿಗೆ ಸರ್ವಪತನ ಕಂಡಿತು.
ಐಪಿಎಲ್ನಲ್ಲಿ ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ತಂಡದ ಮೊತ್ತ 24ರನ್ಗಳಿದ್ದಾಗ ಪೆವಿಲಿಯನ್ ಸೇರಿದರು. ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದ ಬ್ಯಾಟರ್ ಸೂರ್ಯವಂಶಿ ಈ ಪಂದ್ಯದಲ್ಲಿ ಕೇವಲನ 9 ರನ್ಗಳಿಸಲಷ್ಟೆ ಶಕ್ತರಾದರು. ಆರಂಭಿಕ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದನ್ನೂ ಓದಿ :ಕೆರೆಗೆ ಬಿದ್ದ ಯುವತಿ : ಜೀವದ ಹಂಗು ತೊರೆದು ರಕ್ಷಿಸಿದ ಗೃಹರಕ್ಷಕ ಸಿಬ್ಬಂದಿ !
ನಂತರ ಕ್ರೀಸ್ಗೆ ಬಂದ ಆಂದ್ರೆ ಸಿದ್ದಾರ್ಥ್(20), ಕೆ.ಪಿ ಕಾರ್ತಿಕೇಯ (26), ಮತ್ತು ನಾಯಕ ಮೊಹಮ್ಮದ್ ಅಮಾನ್ (26) ಎರಡಂಕಿ ರನ್ಗಳಿಸಲಷ್ಟೆ ಶಕ್ತರಾದರು. ಆದರೆ ದೊಡ್ಡ ಇನಿಂಗ್ಸ್ ಕಟ್ಟಲು ಯಾರಿಂದಲೂ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಹಾರ್ಧಿಕ್ ರಾಜ್ 24 ರನ್ ಗಳಿಸಿ ಹೋರಾಟ ಮಾಡಿದರು ಪಂದ್ಯ ಗೆಲ್ಲುವಲ್ಲಿ ಭಾರತ ತಂಡ ವಿಫಲವಾಯಿತು.
ಬಾಂಗ್ಲಾ ಪರ ಉತ್ತಮ ಬೌಲಿಂಗ್ ಮಾಡಿದ ಇಕ್ಬಾಲ್ ಹುಸೈನ್ ಇಮಾಮ್ ಮತ್ತು ನಾಯಕ ಮೊಹಮ್ಮದ್ ಅಜಿಜುಲ್ ಹಕಿಮ್ ತಮಿಮ್ ತಲಾ ಮೂರು ವಿಕೆಟ್ ಗಳಿಸಿ ಬಾಂಗ್ಲಾ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.