Sunday, December 22, 2024

ಮೊಬೈಲ್​ ರಿಪೇರಿಗೆ ಹಣ ನೀಡದಕ್ಕೆ ಮನನೊಂದ ಬಾಲಕ ಆತ್ಮಹ*ತ್ಯೆ !

ಚಿಕ್ಕಬಳ್ಳಾಪುರ : ಮೊಬೈಲ್​ ರಿಪೇರಿಗೆ ತಾಯಿ ಹಣ ಕೊಡದಿದ್ದಕ್ಕೆ ಬೇಸರಗೊಂಡ ಯುವಕ ಆತ್ಮಹತ್ಯೆಗೆ ಶರಣಾಗಿದ್ದು. ಮೃತ ಯುವಕನನ್ನು ಅಖಿಲ್​ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಗೌರಿಬಿದನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯಲ್ಲಿ ಘಟನೆ ನಡೆದಿದ್ದು. ತಿಮ್ಮಯ್ಯ-ರಾಧಮ್ಮ ದಂಪತಿಗಳ ಪುತ್ರ ಅಖಿಲ್​ ಹತ್ತನೇ ತರಗತಿ ಫೇಲ್​ ಆಗಿದ್ದು ಕೆಲಸ ಮಾಡಿಕೊಂಡಿದ್ದನು. ಆತನ  ಮೊಬೈಲ್​ ಪೋನ್​ ಹಾಳಾಗಿದ್ದರಿಂದ ಆತ ತನ್ನ ತಾಯಿಯ ಬಳಿಯಲ್ಲಿ ಮೊಬೈಲ್​ ರಿಪೇರಿ ಮಾಡಿಸಲು ಹಣ ಕೇಳಿದ್ದನು.

 ಇದನ್ನೂ ಓದಿ : ಬೈಕ್ ಓಡಿಸುವಾಗಲೆ ಹೃದಯಾಘಾತ : ಸಾ*ವನ್ನಪ್ಪಿದ ಬೈಕ್​ ಸವಾರ!

ಈ ವೇಳೆ ತಾಯಿ ತನ್ನ ಬಳಿ ಹಣವಿಲ್ಲ, ಬೇರೆಯವರ ಮನೆಯಿಂದ ಸಾಲ ತೆಗೆದುಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರಕ್ಕೆ ಹೋಗಿದ್ದಾಗ ಯುವಕ ಅಖಿಲ್​ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಗೌರಿಬಿದನೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES