ತುಮಕೂರು: ಪ್ರೀತಿಸಿದ ಯುವತಿಯ ಕುಟುಂಬ್ಥರು ಮದುವೆಗೆ ನಿರಾಕರಿಸಿದಕ್ಕೆ ಮನನೊಂದ ಯುವಕ ಯುವತಿ ಮನೆಯ ಮುಂದೆಯೆ ನೇಣಿಗೆ ಶರಣಾಗಿದ್ದು. ಮೃತ ವ್ಯಕ್ತಿಯನ್ನು 32 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ.
ತುಮಕೂರಿನ ಜಯನಗರ ಬಳಿಯ ಚನ್ನಪ್ಪನಪಾಳ್ಯದಲ್ಲಿ ಘಟನೆ ನಡೆದಿದ್ದು.ಟಿಟಿ ವಾಹನದ ಚಾಲಕನಾಗಿದ್ದ ಮಂಜುನಾಥ್ ಪಕ್ಕದ ಮನೆಯ ಯುವತಿಯನ್ನು ಕೆಲ ತಿಂಗಳಿಂದ ಪ್ರೀತಿಸುತ್ತಿದ್ದನು. ಯುವತಿಯು ಕೂಡ ಮಂಜುನಾಥ್ನನ್ನು ಪ್ರೀತಿಸುತ್ತಿದ್ದಳು. ಆದರೆ ಯುವತಿ ಆಪ್ರಾಪ್ತಳಾಗಿದ್ದರಿಂದ ಯುವತಿ ಮನೆಯವರು ಯುವತಿಯನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದರು.
ಇದರಿಂದ ಮನನೊಂದ ಯುವಕ ಮಂಜುನಾಥ್ ತಡರಾತ್ರಿ ಯುವತಿ ಮನೆಯ ಮುಂದೆಯೆ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಜಯನಗರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಭಂದ ಜಯನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.