ಬೆಳಗಾವಿ : ಗೂಗಲ್ ಮ್ಯಾಪ್ ಎಡವಟ್ಟಿನಿಂದ ಗೋವಾಕ್ಕೆ ಹೋಗಬೇಕಾದ ಸ್ನೇಹಿತರು, ಬೆಳಗಾವಿಯ ದಟ್ಟ ಪಶ್ಚಿಮ ಘಟ್ಟ ಅರಣ್ಯಕ್ಕೆ ಹೋಗಿ ಸಿಲುಕಿದ್ದು ನಂತರ ಪೋಲಿಸರು ಬಂದು ರಕ್ಷಿಸಿ ಸರಿಯಾದ ಮಾರ್ಗ ತೋರಿದ್ದಾರೆ ಎಂದು ಮಾಹಿತಿ ದೊರೆತಿದೆ.
ಆಂದ್ರಪ್ರದೇಶದಿಂದ 4 ಜನ ಗೋವಾಕ್ಕೆ ಹೊರಟ್ಟಿದ್ದರು. ಗೂಗಲ್ ಮ್ಯಾಪ್ ನೋಡಿಕೊಂಡು ಗಾಡಿ ಚಲಾಯಿಸುತ್ತಿದ್ದ ಇವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಡಿಗುಂಜಿ ಬಳಿ ಕಾಡಿನ ಒಳಗೆ ಹೋಗಿದ್ದಾರೆ. ಮಧ್ಯರಾತ್ರಿ ಸಮಯವಾದ್ದರಿಂದ ದಾರಿ ತಪ್ಪಿ ಸುಮಾರು 10ಕಿಮೀನಷ್ಟು ದೂರ ಕಾಡಿನ ಒಳಗೆ ಕ್ರಮಿಸಿದ್ದಾರೆ.
ನಂತರ ರಸ್ತೆ ಮುಗಿದು ಹಳ್ಳ ಬಂದಾಗ ತಾವು ದಾರಿ ತಪ್ಪಿರುವುದು ಅರಿವಾಗಿದ್ದು. ಗಾಬರಿಯಾಗದೆ ಪೋಲಿಸರಿಗೆ ಕರೆ ಮಾಡಿದ್ದಾರೆ. ಪೋಲಿಸರು ವಿಷಯವನ್ನು ತಿಳಿದು ಸ್ಥಳಕ್ಕೆ ತೆರಳಿ ನಾಲ್ವರನ್ನು ರಕ್ಷಿಸಿದ್ದು. ಅವರನ್ನು ಮುಖ್ಯರಸ್ತೆಗೆ ಕರೆತಂದು ಗೋವಾ ದಾರಿ ತೋರಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.