ಕೋಲಾರ : ಬಿಜೆಪಿ ಒಳಜಗಳ ದಿನದಿಂದ ದಿನಕ್ಕೆ ತಾರಕಕ್ಕೇರುತಿದ್ದು. ಮಾಜಿ ಸಚಿವ ರೇಣುಕಚಾರ್ಯ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ರನ್ನು ಹಿಂದು ಹುಲಿಯಲ್ಲ , ಅವರು ಹಿಂದು ಇಲಿ ಎಂದು ಹೇಳಿದ್ದಾರೆ.
ಕೋಲಾರದ ಕುರುಡುಮಲೆ ದೇಗುಲದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ ನೀಡಿದ್ದು. ಯತ್ನಾಳ್ ಪಕ್ಷ ವಿರೋಧಿ ಕೆಲಸವನ್ನು ಮಾಡುತ್ತಿದ್ದಾರೆ. ಆವರು ಹಿಂದೂ ಹುಲಿಯಲ್ಲ, ಅವರು ಹಿಂದೂ ಇಲಿ, ಬಿಜೆಪಿಗೆ ಹೊರಗಿನ ದುಷ್ಟಶಕ್ತಿಗಳೆಂದರೆ ಅದು ಕಾಂಗ್ರೆಸ್, ಹಾಗೂ ಒಳಗಿನ ದುಷ್ಟಶಕ್ತಿಗಳೆಂದರೆ ಪಕ್ಷ ವಿರೋಧಿಗಳು. ಯತ್ನಾಳ್ ಅವರು ಕಾಂಗ್ರೆಸ್ ಮುಖವಾಣಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಸುಪಾರಿ ಪಡೆದುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಯತ್ನಾಳ್ ಮೇಲೆ ಕಿಡಿಕಾರಿದರು.
ಮುಂದುವರಿದು ಮಾತನಾಡಿದ ರೇಣುಕಾಚಾರ್ಯ ‘ನನ್ನ ಬಗ್ಗೆ ಹಗುರವಾಗಿ ಮಾತನಾಡ ಬೇಡ ಎಂದು ಏಕವಚನದಲ್ಲೆ ಯತ್ನಾಳ್ ಮೇಲೆ ವಾಗ್ದಾಳಿ ನಡೆಸಿದರು. ಯತ್ನಾಳ್ ಒಬ್ಬ ಗೋಮುಖ ವ್ಯಾಘ್ರ, ನೀನು ಹಿಂದೂ ಮುಖವಾಡ ಹಾಕಿಕೊಂಡಿದ್ದೀಯ, ನೀನೆ ಪಕ್ಷದಿಂದ ಇಫ್ತೀಯರ್ ಕೂಟ ಮಾಡಿದ್ದೆ, ಪಕ್ಷದಲ್ಲಿ ಸ್ವಯಂ ಘೊಷಿತ ಹಿಂದು ಹುಲಿ ಎಂದು ಹೇಳ್ತೀಯ, ನಿನಗೆ ಮಾನ ಮರ್ಯಾದೆ ಇದೆಯ ಎಂದು ವಾಗ್ದಾಳಿ ನಡೆಸಿದರು.