ಬೆಂಗಳೂರು : ಸಿಎಂ ಸಿದ್ಧರಾಮಯ್ಯರನ್ನು ಬೆಂಬಲಿಸಿ ಹಾಸನದಲ್ಲಿ ನಿಗದಿಯಾಗಿರುವ ಸ್ವಾಭಿಮಾನಿ ಸಮಾವೇಶದ ಕುರಿತು ಮಾತನಾಡಿದ ಮಾಜಿ ಸಚಿವ ಹೆಚ್. ಆಂಜನೇಯ ಸಿದ್ದರಾಮಯ್ಯನ ಪರವಾಗಿ ಬ್ಯಾಟ್ ಬೀಸಿದ್ದು. ಸಿಎಂ ಸಿದ್ದರಾಮಯ್ಯ ದಕ್ಷಿಣ ಭಾರತದ ಅತ್ಯಂತ ಪ್ರಬಲ ನಾಯಕ ಎಂದು ಹೇಳಿದರು.
ಸ್ವಾಭಿಮಾನಿ ಸಮಾವೇಶದ ಪರವಾಗಿ ಬ್ಯಾಟಿಂಗ್ ಮಾಡಿದ ಮಾಜಿ ಸಚಿವ ಹೆಚ್ ಆಂಜನೇಯ ‘ ಸಮಾವೇಶ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ. ಇದರಿಂದ ಪಕ್ಷದ ಸಂಘಟನೆಯ ಕೆಲಸ ಕೂಡ ಆಗಲಿದೆ. ಅಷ್ಟೆ ಅಲ್ಲದೆ ಸಿದ್ದರಾಮಯ್ಯನ ಅಭಿಮಾನಿಗಳು ಎಲ್ಲಾ ಜಿಲ್ಲೆಯಲ್ಲಿ ಇದ್ದಾರೆ, ಸಿದ್ದರಾಮಯ್ಯನವರು ಕಾಂಗ್ರೆಸ್ಗೆ ಶಕ್ತಿಯಾಗಿದ್ದಾರೆ. ಅವರು ದಕ್ಷಿಣ ಭಾರತದಲ್ಲೇ ಪ್ರಬಲ’ ನಾಯಕರಾಗಿದ್ದಾರೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಹೆಚ್. ಆಂಜನೇಯ ‘ ಅಹಿಂದ ಸಮಾವೇಶವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷ ಸಂಘಟನೆಗಾಗಿ ಆಗಿಂದಾಗ್ಗೆ ಸಮಾವೇಶಗಳು ನಡೆಯುತ್ತಿರುತ್ತವೆ. ಅದಕ್ಕೆ ನಾವು ಸಮಾವೇಶ ನಡೆಸುತ್ತಿವೆ. ಈ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷರನ್ನು ಕರೆಸುತ್ತೇವೆ. ಅವರು ಕೂಡ ಕೆಳ ಸಮುದಾಯದಿಂದ ಬಂದು ಉನ್ನತ ಸ್ಥಾನದಲ್ಲಿದ್ದಾರೆ.
ಕೇವಲ ಇಲ್ಲಿಗೆ ನಿಲ್ಲದೆ ಮುಂದಿನ ದಿನಗಳಲ್ಲಿ ಚಿತ್ರದುರ್ಗ ಸೇರಿದಂತೆ ಹಲವೆಡೆ ಸಮಾವೇಶ ಮಾಡುತ್ತೇವೆ.
ಮುಂದಿನ ಅವಧಿಗೂ ಪಕ್ಷವನ್ನ ಅಧಿಕಾರಕ್ಕೆ ತರಲು ಈ ಸಮಾವೇಶವನ್ನು ನಡೆಸುತ್ತೇವೆ. ಈ ವಿಚಾರಕ್ಕೆ ಯಾರು ಅಪಸ್ವರ ಎತ್ತುವ ಅಗತ್ಯ ಇಲ್ಲ, ನಾನೇನು ಬಿಜೆಪಿ, ಜೆಡಿಎಸ್ನವರನ್ನು ಕರೆದು ಸಮಾವೇಶ ನಡೆಸುತ್ತಿಲ್ಲ ಎಂದು ಸ್ವಾಭಿಮಾನಿ ಸಮಾವೇಶಕ್ಕೆ ಅಪಸ್ವರ ಎತ್ತಿದವರ ವಿರುದ್ದ ಹೆಚ್. ಆಂಜನೇಯ ಕಿಡಿಕಾರಿದರು.