ಮೈಸೂರು: ಮೈಕ್ರೋ ಫೈನಾನ್ಸ್ನಿಂದ ಮಹಿಳೆಯೊಬ್ಬರು ಸಾಲ ತೆಗೆದುಕೊಂಡು ಅದನ್ನು ತೀರಿಸಲಾಗದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು. ಮೈಸೂರು ಜಿಲ್ಲೆಯ ಹುಣುಸೂರು ತಾಲ್ಲೂಕಿನ ಕಿರಿಯಾಜಿ ಗ್ರಾಮದಲ್ಲಿ ನಡೆದಿದೆ.
ಸುಶೀಲಾ ಎಂಬ 48 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು. ಮಹಿಳೆಯು ಫಾರ್ಚೂನ್ ಮೈಕ್ರೋ ಫೈನಾನ್ಸ್ನಿಂದ ಸಾಲ ಪಡೆದಿದ್ದರು ಪ್ರತಿ ತಿಂಗಳು ಅವಧಿಗೆ ಸರಿಯಾಗಿ ಸಾಲದ ಕಂತಿನ ಹಣವನ್ನು ಕಟ್ಟುತ್ತಿದ್ದರು. ಆದರೆ ಈ ತಿಂಗಳ ಹಣವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡದ ಹಿನ್ನಲೆ ಫೈನಾನ್ಸ್ನವರು ಮನೆಯ ಬಳಿ ಬಂದು ಜಗಳ ಮಾಡಿದ್ದರು ಎಂದು ಮಾಹಿತಿ ದೊರೆತಿದೆ.
ಫೈನಾನ್ಸ್ ಅಧಿಕಾರಿಗಳು ಜಗಳ ಮಾಡಿದ ಹಿನ್ನಲೆಯಲ್ಲಿ ಮನನೊಂದ ಮಹಿಳೆ ಕ್ರಿಮಿನಾಶಕದ ಗುಳಿಗೆಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು. ಮಹಿಳೆಯನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು. ಘಟನೆ ಸಂಬಂಧ ಹುಣಸೂರು ಪೋಲಿಸ್ ಠಾಣೆಯಲ್ಲಿ ಮಹಿಳೆಯ ಪುತ್ರ ನವೀನ್ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.