ಮಂಡ್ಯ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಚಾರವೆಂಬುದು ತಾಂಡವವಾಡುತ್ತಿದ್ದು. ಮಂಡ್ಯದ ಅಬಕಾರಿ ಇಲಾಖೆಯ ಅಧಿಕಾರಿಗಳು ಬಾರ್ ಲೈಸೆನ್ಸ್ ನೀಡಲು 20 ಲಕ್ಷ ಬೇಡಿಕೆ ಇಟ್ಟ ವರದಿಯನ್ನುಚ ಸಂಪೂರ್ಣ ಸಾಕ್ಷಿ ಸಮೇತ ಪವರ್ ಟಿವಿ ವರದಿ ಮಾಡಿದೆ.
ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಇತ್ತೀಚೆಗೆ ನಡೆದ ಮಹರಾಷ್ಟ್ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಆರೋಪಿಸಿದ್ದರು. ಸುಮಾರು 700 ಕೋಟಿಯಷ್ಟು ಅಕ್ರಮವಾಗಿದೆ ಎಂದಿದ್ದ ಮೋದಿ, ಆ ಹಣವನ್ನು ಮಹರಾಷ್ಟ್ರದ ಚುನಾವಣೆಗೆ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಈ ಆರೋಪವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತಿರಸ್ಕರಿಸಿತ್ತು. ಇದರ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇದನ್ನು ಸಾಬೀತು ಪಡಿಸಿದರೆ ನಾನು ರಾಜಕೀಯ ನೀವೃತ್ತಿ ತೆಗೆದುಕೊಳ್ಳುವುದಾಗಿ ಚಾಲೆಂಜ್ ಮಾಡಿದ್ದರು.
ಆದರೆ ಇದೀಗ ಈ ಆರೋಪ ಸಾಬೀತಾಗಿದ್ದು. ಮಂಡ್ಯದ ಅಬಕಾರಿ ಡಿಸಿ ರವಿ ಶಂಕರ್ ಮತ್ತು ಇನ್ಸ್ಪೆಕ್ಟರ್ ಶಿವ ಶಂಕರ್ ವಿರುದ್ದ ಲಂಚ ಕೇಳಿದ ಆರೋಪ ಬಂದಿದೆ. ಇದರ ಬಗ್ಗೆ ಕೈ ಕಾರ್ಯಕರ್ತ ಪುನೀತ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದು. ಅಧಿಕಾರಿಗಳು ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ
ಪುನೀತ್ ಎಂಬಾತ ಮದ್ದೂರು ತಾಲ್ಲೂಕಿನಲ್ಲಿ ಬಾರ್ ಅಂಡ್ ರೆಸ್ಟೂರೆಂಟ್ ತೆರೆಯಲು ತನ್ನ ತಾಯಿಯಾದ ಲಕ್ಷ್ಮಮ್ಮನ ಹೆಸರಿನಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುಮಾರು ನಾಲ್ಕು ಬಾರಿ ಅರ್ಜಿ ಸಲ್ಲಿಸಿದರು ಕೂಡ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದರು. ಯಾಕೆ ಎಂದು ಪ್ರಶ್ನಿಸಿದದಾಗ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಪವರ್ ಟಿವಿಯಲ್ಲಿ ಆರ್.ಬಿ ತಿಮ್ಮಾಪುರ್ ಮಾತು !
ಪವರ್ ಟಿವಿಗೆ ಕರೆ ಮಾಡಿ ಮಾತನಾಡಿದ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ. ಅಧಿಕಾರಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಪವರ್ ಟಿವಿಯ ಮೂಲಕ ರಾಜ್ಯದ ಜನರಿಗೆ ಸಂದೇಶ ನೀಡಿದ ಸಚಿವರು ‘ ಇಲಾಖೆಯಲ್ಲಿನ ಇಂತಹ ಅಧಿಕಾರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ನಾನು ಅವರನ್ನು ಇಂದೇ ಉಚ್ಚಾಟನೆ ಮಾಡುತ್ತೇನೆ ಎಂದು ಪವರ್ ಟಿವಿಯ ಮೂಲಕ ಭರವಸೆ ನೀಡಿದರು.