Tuesday, November 26, 2024

ಬಿಹಾರದಿಂದ ಅಕ್ರಮವಾಗಿ ಪಿಸ್ತೂಲ್ ತಂದು ಮಾರಾಟಕ್ಕೆ ಯತ್ನಿಸಿದ ಆರೋಪಿಗಳ ಬಂಧನ

ಬೆಂಗಳೂರು : ಬಿಹಾರದಿಂದ ನಗರಕ್ಕೆ ಅಕ್ರಮವಾಗಿ ಪಿಸ್ತೂಲ್ ತಂದು ಮಾರಾಟಕ್ಕೆ ಯತ್ನಿಸಿದ ಇಬ್ಬರು  ಆರೋಪಿಗಳನ್ನು ಪೋಲಿಸರು ಬಂಧಿಸಿದ್ದು. ಬಂಧಿತರಿಂದ 2 ಪಿಸ್ತೂಲುಗಳು ಮತ್ತು 4 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ದೊರೆತಿದೆ.

ಬಿಹಾರ ಮೂಲದ ಇಬ್ಬರು ಅಣ್ಣ ತಮ್ಮಂದಿರು ಹಾರೋಹಳ್ಳಿಯಲ್ಲಿ ಟೈಲ್ಸ್​​ ಕೆಲಸ ಮಾಡಿಕೊಂಡು ಮನೆಯೊಂದರಲ್ಲಿ ವಾಸವಿದ್ದರು. ಇತ್ತೀಚೆಗೆ ಬಿಹಾರಕ್ಕೆ ಹೋಗಿದ್ದ ತಮ್ಮ ವಿಧ್ಯಾನಂದ ಬಿಹಾರದಿಂದ ರೈಲಿನಲ್ಲಿ ಎರಡು ಕಂಟ್ರೀ ಮೇಡ್​ ಪಿಸ್ತೂಲುಗಳನ್ನು ತಂದಿದ್ದನು. ಮೆಜಸ್ಟಿಕ್​​ ರೈಲು ನಿಲ್ದಾಣಕ್ಕೆ ಬಂದಿದ್ದ ತಮ್ಮನನ್ನು ಪಿಕ್​ ಮಾಡಲು ಬಂದಿದ್ದ ಅಣ್ಣ ಪ್ರೇಮಾನಂದ ತಮ್ಮನನ್ನು ಕರೆದುಕೊಂಡು ವಾಪಾಸಾಗಿದ್ದರು.

ವಾಪಾಸ್​ ಹೋಗುವ ಈ ವೇಳೆ ಕೊಪ್ಪ-ಬೇಗೂರು ರಸ್ತೆಯ ನೈಸ್ ರೋಡ್ ನಲ್ಲಿ ಹುಳಿಮಾವು ಪೊಲೀಸರು ವಾಹನಗಳ ಪರಿಶೀಲನೆ ಮಾಡುವ ವೇಳೆ ಇವರನ್ನು ತಡೆದು ನಿಲ್ಲಿಸಿದ್ದು. ಬೈಕ್​ ದಾಖಲೆಗಳನ್ನು ಕೇಳಿದ್ದಾರೆ. ಆದರೆ ಪೋಲಿಸರನ್ನು ನೋಡುತ್ತಿದ್ದಂತೆ ಆರೋಪಿಗಳು ಬೈಕ್​ ನಿಲ್ಲಿಸಿ ಓಡಿ ಹೋಗಲು ಯತ್ನಿಸಿದ್ದು. ಪೋಲಿಸರು ಆರೋಪಿಗಳನ್ನು ತಡೆದು ನಿಲ್ಲಿಸಿ ಬ್ಯಾಗ್​ ಚೆಕ್​ ಮಾಡಿದ್ದಾರೆ.

ಮೊದಲಿಗೆ ಗಾಂಜಾ ಇರಬಹುದು ಎಂಬ ಅನುಮಾನದಿಂದ ಬ್ಯಾಗ್​ ಹುಡುಕಿದ ಪೋಲಿಸರಿಗೆ ಶಾಕ್​ ಎದುರಾಗಿದ್ದು. ಆ ಬ್ಯಾಗ್​ನಲ್ಲಿ ಎರಡು ಪಿಸ್ತೂಲುಗಳು ಮತ್ತು ನಾಲ್ಕು ಜೀವಂತಬ ಗುಂಡುಗಳು ಪತ್ತೆಯಾಗಿವೆ. ತಕ್ಷಣವೆ ಆರೋಪಿಗಳನ್ನು ಬಂಧಿಸಿದ್ದು ಆರೋಪಿಗಳು ವಿಚಾರಣೆ ವೇಳೆ ಅನೇಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ಈಗಾಗಲೇ ವಿದ್ಯಾನಂದನ ಮೇಲೆ ಆರ್ಮ್ಸ್ ಆಕ್ಟ್​ ಅಡಿಯಲ್ಲಿ ಪ್ರಕರಣವಿದ್ದು, ಬಿಹಾರದ ಪರಿಚಿತ ವ್ಯಕ್ತಿಯೊಬ್ಬನಿಂದ ಗನ್​ ಪಡೆದು ತಂದಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಇದರ ಕುರಿತಾಗಿ ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES