ಪರ್ಥ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲೆ ಭಾರತ ತಂಡ ಗೆದ್ದು ಬೀಗಿದ್ದು. 295 ರನ್ಗಳ ಭಾರೀ ಅಂತರದಿಂದ ಆಸ್ಟ್ರೇಲಿಯಾ ವಿರುದ್ದ ಗೆದ್ದು ಬೀಗಿದೆ.
ಅಥಿತೇಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೆ ಗೆದ್ದು ಬೀಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 150 ಕ್ಕೆ ಅಲೌಟ್ ಆಗಿದ್ದ ಭಾರತ ತಂಡ. ಆಸ್ಟ್ರೇಲಿಯಾ ತಂಡವನ್ನು ಕೇವಲ 104 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಸಫಲವಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಕ್ಯಾಪ್ಟನ್ ಬುಮ್ರಾ 5 ವಿಕೆಟ್ ಪಡೆದು ಮಿಂಚಿದ್ದರು.
46 ರನ್ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡದ ಬ್ಯಾಟ್ಸ್ಮನ್ಗಳ ಆಟಕ್ಕೆ ಆಸ್ಟ್ರೇಲಿಯಾದ ಬೌಲರ್ಗಳು ಬೆಂಡಾದರು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಯುವ ಬ್ಯಾಟ್ಸ್ಮ್ಯಾನ್ ಯಶಸ್ವಿ ಜೈಸ್ವಾಲ್ ಮತ್ತು ಕನ್ನಡಿಗ ರಾಹುಲ್ ಅತ್ಯಧ್ಬುತ ಆರಂಭ ನೀಡಿದರು. ಯಶಸ್ವಿ ಜೈಸ್ವಾಲ್ 161 ರನ್ಗಳಿಸಿ ಮಿಚಲ್ ಮಾರ್ಷ್ಗೆ ವಿಕೆಟ್ ಒಪ್ಪಿಸಿದರೆ. ಕೆ.ಎಲ್ ರಾಹುಲ್ 77 ರನ್ಗಳಿಸಿ ಮಿಚಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. ಇವರಿಬ್ಬರ ವಿಕೆಟ್ನ ನಂತರ ಮಾಜಿ ನಾಯಕ ವಿರಾಟ್ ಕೊಹ್ಲಿ ಅಜೇಯ 100 ರನ್ಗಳಿಸಿದ ವೇಳೆ ಭಾರತ ಡಿಕ್ಲೇರ್ ಘೋಷಿಸಿತು.
ಆಸ್ಟ್ರೇಲಿಯಾಗೆ 533 ರನ್ಗಳ ಬೃಹತ್ ಗುರಿ ನೀಡಿದ ಭಾರತದ ಬೌಲರ್ಗಳ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ ತಂಡ ಧೂಳಿಪಟವಾಗಿದ್ದು. ಕೇವಲ 238 ರನ್ಗಳಿಗೆ ತನ್ನಲ್ಲಾ ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ ಮೊದಲ ಪಂದ್ಯದಲ್ಲಿ ಸೋಲನುಭವಿಸಿದೆ. ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್(89) ಕೆಲಕಾಲ ಭಾರತದ ಬೌಲರ್ಗಳಿಗೆ ತಲೆನೋವಾಗಿ ಪರಿಣಮಿಸಿದರು ಕೂಡ ಬುಮ್ರಾ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಪರ ಕ್ಯಾಪ್ಟನ್ ಬುಮ್ರ ಮತ್ತು ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದು ಮಿಂಚಿದರೆ. ವಾಷಿಂಗ್ಟನ್ ಸುಂದರ್ 2, ಹರ್ಷಿತ್ ರಾಣಾ ಮತ್ತು ನಿತಿಶ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.