ಬೆಂಗಳೂರು : ನಗರದ ಸಂಜಯ್ ಗಾಂಧಿ ಆಸ್ಪತ್ರೆಗ ಭೇಟಿ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್ ಸಿದ್ದರಾಮಯ್ಯನವರ ಸರ್ಕಾರ 16ತಿಂಗಳಲ್ಲಿ ಬಡವರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡ್ತಿದೆ.
ರಾಜ್ಯದಲ್ಲಿ ನಿತ್ಯ ಉಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್ ’ಸಿಎಂ ಹಾಲು, ಆಲ್ಕೋಹಾಲ್, ಸ್ಟಾಂಪ್ ಡ್ಯೂಟಿ ಚಾರ್ಜ್ ಹೆಚ್ಚು ಮಾಡಿದ್ದಾರೆ. ಆರೋಗ್ಯಕ್ಕೆ ಮತ್ತು ಶಿಕ್ಷಣಕ್ಕೆ ಹಣದ ಕಡಿವಾಣ ಹಾಕಬಾರದು ಎಂದು ಹೇಳುತ್ತಾರೆ. ಆದರೆ ಬಜೆಟ್ ವೇಳೆ ಸಿದ್ದರಾಮಯ್ಯ ಸರ್ಕಾರ ಕಡಿವಾಣ ಹಾಕಿತ್ತು.ಈಗ ಆರೋಗ್ಯ ಇಲಾಖೆಯಲ್ಲಿ ಹಣಕಾಸಿನ ತೊಂದರೆಯಿದೆ. ಅದಕ್ಕೆ ಆಸ್ಪತ್ರಗಳ ಸೇವಾಶುಲ್ಕವನ್ನ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಆರ್.ಅಶೋಕ್ ‘ ಆಸ್ಪತ್ರೆಗಳಲ್ಲಿ ರಿಜಿಸ್ಟ್ರೇಶನ್ ಚಾರ್ಜ್ 30ರೂಪಾಯಿಗೆ ಹೆಚ್ಚಿಸಿದ್ದಾರೆ. ಅಡ್ಮಿಶನ್ ಚಾರ್ಜ 150ಮಾಡಿದ್ದಾರೆ ಆಕ್ಸಿಜನ್ ,ವೆಂಟಿಲೇಟರ್ ಚಾರ್ಜ್ 2,160 ರೂಪಾಯಿಗೆ ಏರಿಸಿದ್ದಾರೆ. ಇಷ್ಟಲ್ಲಾ ಸಾಲದು ಎಂಬತ್ತೆ ಬಿಪಿಎಲ್ ಕಾರ್ಡ್ ರದ್ದು ಮಾಡ್ತಿದ್ದಾರೆ. ವಕ್ಪ್ ಒತ್ತುವರಿಯಾಗಿ ಒಂದ್ಕಡೆ ರೈತರ ಜಮೀನ್ ಹೋಗ್ತಿದೆ. ಬಡವರು ಪರ ಇದ್ದೇನೆ ಹೀಗಾಗಿ ಬಿಜೆಪಿಗೆ ಸಿಟ್ಟು ಎಂದು ಸಿದ್ದರಾಮಯ್ಯ ಹೇಳ್ತಾರೆ. ಹಾಗಾಗಿಯೇ ಮೂಡಾ ಕೇಸ್ ಹಾಕಿದ್ದಾರೆ ಎಂತಾರೆ ಇದೇನಾ ಸಿದ್ದರಾಮಯ್ಯನವರ ಬಡವರ ಪರ.
ಈ ಸರ್ಕಾರ ಪಾಪಾರ್ ಆಗಿದೆ. ಪಾಪರ್ ಆಗಿಲ್ಲ ಎನ್ನೊದಕ್ಕೆ ಒಂದೇ ಒಂದು ಸಾಕ್ಷೀ ಕೊಡಿ. ಕಾಂಗ್ರೆಸ್‌ನವರ ಕೇಳ್ತೇನೆ ಯಾವ ಲೆಕ್ಕದಲ್ಲಿ ನೀವು ಬಡವರ ಪರ ಹೇಳಿ? ಎಂದು ಕಾಂಗ್ರೆಸ್ ಆಡಳಿತ ಕುರಿತು ವಾಗ್ದಾಳಿ ನಡೆಸಿದರು.
ಜನರು ಎರಡು ಸಾವಿರ ಬೇಡ, ರೇಶನ್ ಕಾರ್ಡ್ ಕೊಡಿ ಸಾಕು ಎಂದು ಹೇಳ್ತಿದ್ದಾರೆ. ಆದರೆ ಡಿ.ಕೆ ಶಿವಕುಮಾರ್ ಗಾಬರಿಯಾಗಬೇಡಿ ಮತ್ತೆ ಅರ್ಜಿ ಕೊಡಿ ಎಂದು ಹೇಳುತ್ತಿದ್ದಾರೆ. ಇದು ಲಂಚ ಹೊಡೆಯುವ ಸ್ಕೀಮ್ ಆಗಿದೆ.
ಪ್ರತಿಕಾರ್ಡ್ಗೆ 10ಸಾವಿರ ಎಂದರೆ ಎಷ್ಟಾಯಿತು. ಸರ್ಕಾರಿ ನೌಕರರು ಇದ್ರೆ ಅವರಿಗೆ ನೋಟೀಸ್ ಕೊಡಿ
ದಾಖಲೆ ಪರೀಶೀಲನೆ ಮಾಡಿ, ಮನೆ ಬಾಗಿಲಿಗೆ ಹೋಗಿ ರದ್ದು ಮಾಡಿ. ಯಾರು ಸಾಹುಕಾರರಿಗೆ ಕೊಡಿ ಎಂದು ಹೇಳಿದ್ರೂ.ನೀವೇ 50ವರ್ಷ ಕರ್ನಾಟಕವನ್ನ ಆಳಿದ್ರಲ್ಲ. ಆಗ ಹೇಗೆ ಬಿಪಿಎಲ್ ಕಾರ್ಡ್ ಕೊಟ್ರಿ ಸಾಹುಕಾರರಿಗೆ.
ಲಂಚ ತಕೊಂಡು ಬಿಪಿಎಲ್ ಕಾರ್ಡ್ ಕೊಟ್ರಿ ಲಂಚದ ಸರ್ಕಾರ ಇದು,ಲಂಚ ಇದ್ರೆ ವಿಧನಾ ಸೌಧಕ್ಕೆ ಎಂಟ್ರಿ. ಎಂದು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು.