ಅನೇಕಲ್ : ಅನೈತಿಕ ಸಂಬಂಧ ಹಿನ್ನಲೆ ವಕೀಲರೊಬ್ಬರನ್ನು ಕೋರ್ಟ್ ಆವರಣದಲ್ಲಿಯೆ ಕೊಚ್ಚಿ ಕೊಲೆ ಮಾಡಿಲು ಯತ್ನಿಸಿದ ಘಟನೆಗೆ ಸಂಬಂಧಸಿದಂತೆ ಹೊಸ ಬೆಳವಣಿಗೆಯಾಗಿದ್ದು. ತಮಿಳುನಾಡಿನಲ್ಲಿಇಂದು ಮತ್ತು ನಾಳೆ ವಕೀಲರು ನ್ಯಾಯಲಯವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನೆನ್ನೆ ಸಂಜೆ ಘಟನೆ ನಡೆಸಿದ್ದು. ಆನಂದ್ ಎಂಬ ವ್ಯಕ್ತಿ ಕೋರ್ಟ್ ಆವರಣದಲ್ಲಿಯೆ ವಕೀಲ ಕಣ್ಣನ್ರನ್ನು ಕೊಲೆ ಮಾಡಲು ಯತ್ನಿಸಿದ್ದನು. ನಡು ರಸ್ತೆಯಲ್ಲಿಯೆ ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಲು ಯತ್ನಿಸಿದ್ದನು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಕೀಲನನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿದ್ದರು.
ಸದ್ಯ ಆಸ್ಪತ್ರೆಯಲ್ಲಿ ವಕೀಲ ಕಣ್ಣನ್ ಕೋಮ ಸ್ಥಿತಿಯಲ್ಲಿದ್ದು. ನ್ಯಾಯವಾದಿಯ ಮೇಲಿನ ಹತ್ಯಾಯತ್ನ ಖಂಡಿಸಿ ಹೊಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಂದು ಮತ್ತು ನಾಳೆ ತಮಿಳುನಾಡಿನ ಎಲ್ಲಾ ನ್ಯಾಯಲಯಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದು. ಹೊಸೂರು ಕೋರ್ಟ್ ಮುಂದೆ ನೂರಾರು ವಕೀಲರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ ಮತ್ತು ಕೊಲೆ ಆರೋಪಿ ಆನಂದ್ ಪರ ಯಾವ ವಕೀಲನು ವಕಾಲತ್ ಹಾಕದಂತೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆ ಮಾಡಲು ಯತ್ನಿಸಿದ್ದು ಏಕೆ ?
ಕೊಲೆ ಆರೋಪಿ ವಕೀಲ ಆನಂದ್ ಪತ್ನಿ ಸತ್ಯವತಿ ಜೊತೆ ವಕೀಲ ಕಣ್ಣನ್ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಇದೇ ಕಾರಣಕ್ಕೆ ನೆನ್ನೆ ಕೊಲೆ ಮಾಡಲು ಯತ್ನಿಸಿದನು ಎಂದು ಮಾಹಿತಿ ದೊರೆತಿದೆ.
ಇಂದು ಹೊಸೂರು ಪೋಲಿಸರು ವಕೀಲ ಆನಂದ್ ಪತ್ನಿ ಸತ್ಯವತಿಯನ್ನು ಬಂಧಿಸಿದ್ದು. ಸತ್ಯವತಿಯನ್ನು ವಷಕ್ಕೆ ಪಡೆದಿರುವ ಪೋಲಿಸರು ಹೆಚ್ಚಿನ ತನಿಖೆಗೆ ಗುರಿಪಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.