ಬೆಂಗಳೂರು : ರಾಜಧಾನಿಯ ಪಿಜಿಗಳಲ್ಲಿ ಅವ್ಯವಸ್ಥೆಯೆಂಬುದು ಮತ್ತೆ ಮುಂದುವರಿದಿದ್ದು. ಪಿಜಿಯಲ್ಲಿ ನೀಡುವ ಊಟದಲ್ಲಿ ಜೀವಂತ ಇಲಿ ಪತ್ತೆಯಾಗಿದೆ ಎಂಬ ಆಘಾತಕಾರಿಯಾದ ವರದಿ ದೊರೆತಿದೆ.
ಬಿಟಿಎಂ ಲೇಔಟ್ ನ ಡಿಆರ್ಬಿ ಕಂಫರ್ಟ್ಸ್ ಪಿಜಿಯಲ್ಲಿ ನಡೆದ ಘಟನೆ ನಡೆದಿದ್ದು. ಊಟಕ್ಕೆ ಬಂದ ಪಿಜಿ ನಿವಾಸಿಗಳು ಮುಚ್ಚಳ ತೆಗೆಯುತ್ತಿದ್ದಂತೆ ಇಲಿಯ ದರ್ಶನವಾಗಿದೆ. ಇಲಿ ಜೊತೆಗೆ ಊಟದಲ್ಲಿ ಹುಳಗಳೂ ಪತ್ತೆಯಾಗಿದ್ದು ಪಿಜಿ ನಿವಾಸಿಗಳು ಕಂಗಾಲಾಗಿದ್ದಾರೆ.
ಆಹಾರ ಇಲಾಖೆಯಿಂದ ನೋಟಿಸ್ ಜಾರಿ
PGಗಳಲ್ಲಿ ಕಳಪೆ ಊಟ, ಸ್ವಚ್ಛತೆ ಕಾಪಾಡದ ಹಿನ್ನೆಲೆ ಬೆಂಗಳೂರಿನ 41 ಪಿಜಿಗಳಿಗೆ ಆಹಾರ ಸುರಕ್ಷತೆ & ಗುಣಮಟ್ಟ ಇಲಾಖೆಯಿಂದ ನೊಟೀಸ್ ನೀಡಿದ್ದು. ರಾಜ್ಯಾದ್ಯಂತ ಪಿಜಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿ ದೊರೆತಿದೆ.
ಸ್ವಚ್ಛತೆ & ಕಳಪೆ ಊಟದ ಆಹಾರ ಬಗ್ಗೆ ಸಾಲು ಸಾಲು ದೂರುಗಳು ಕೇಳಿ ಬಂದ ಹಿನ್ನಲೆ ರಾಜ್ಯದ್ಯಂತ 305 ಪಿಜಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು. 305 ಪಿಜಿಗಳ ಪೈಕಿ 127 ಪಿಜಿಗಳಿಗೆ ನೊಟೀಸ್ ನೀಡಿದ್ದು. ಈ ಪಿಜಿಗಳಿಗೆ 21 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಮಾಹಿತ ದೊರೆತಿದೆ.