Tuesday, November 19, 2024

ಅನ್ಯಧರ್ಮಿಯ ನೌಕರರಿಗೆ ಇನ್ನು ಮುಂದೆ ತಿರುಪತಿ ದೇವಾಲಯದಲ್ಲಿ ಕೆಲಸವಿಲ್ಲ !

ತಿರುಪತಿ(ನ.19): ತಿರುಪತಿ ದೇವಾಲಯ ಭಾರತದಲ್ಲಿಯೆ ಅತ್ಯಂತ ಪವಿತ್ರ ದೇವಾಲಯ ಎಂಬ ಕೀರ್ತಿಗೆ ಗುರಿಯಾಗಿದೆ. ಈ ದೇವಾಲಯಕ್ಕೆ ದೇಶದ ಹಲವು ಭಾಗಗಳಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ಇಂತಹ ದೇವಾಲಯದ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬನ್ನು ಬಳಿಸಿದ್ದಾರೆ ಎಂಬ ವಿಷಯ ದೇಶಾದ್ಯಂತ ಬಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಇದೀಗ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ದೇವಾಲಯದ ಅನ್ಯಧರ್ಮಿಯ ನೌಕರರನ್ನು ಕೆಲಸದಿಂದ ತೆಗೆಯಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದು. ಸರ್ಕಾರ ಈ ಮನವಿಯನ್ನು ಪುರಸ್ಕರಿಸಿ ಆದಷ್ಟು ಬೇಗ ಆದೇಶ ಹೊರಡಿಸಲಿದೆ ಎಂದು ಮಾಹಿತಿ ದೊರೆತಿದೆ.

ತಿರುಮಲ ತಿರುಪತಿ ದೇವಸ್ಥಾನಂ(TTD)ಸ್ವತಂತ್ರ ಸಮತಿಯಾಗಿದೆ. ಈ ಸಮಿತಿ ಇದೀಗ ಈ ಆದೇಶ ನೀಡಿದೆ. ಟಿಟಿಡಿ ಚೇರ್ಮೆನ್ ಬಿಆರ್ ನಾಯ್ಡು ಈ ಕುರಿತು ಆದೇಶ ನೀಡಿದ್ದಾರೆ. ಹಿಂದೂ ದೇವಸ್ಥಾನದಲ್ಲಿ ಹಿಂದೂಯೇತರರಿಗೆ ಅವಕಾಶ ನೀಡುವುದು ಸರಿಯಲ್ಲ. ಹಿಂದೂ ದೇವರ ಮೇಲೆ ನಂಬಿಕೆ ಇಲ್ಲದವರು ದೇಗುಲದಲ್ಲಿ ಶ್ರದ್ಧಾ ಭಕ್ತಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಟಿಟಿಡಿ ಹೇಳಿದೆ. ಟಿಟಿಡಿ ಈ ನಿರ್ಧಾರದಿಂದ ದೇವಸ್ಥಾನದ 7,000 ಖಾಯಂ ಉದ್ಯೋಗಿಗಳ ಪೈಕಿ 300 ಉದ್ಯೋಗಿಗಳಿಗೆ ಈ ನಿರ್ಧಾರ ಬಿಸಿ ತುಪ್ಪವಾಗಿದೆ.

ಹೌದು, ತಿರುಪತಿ ದೇಗುಲದಲ್ಲಿ ಹಿಂದೂಯೇತರ 300 ಖಾಯಂ ನೌಕರರಿದ್ದಾರೆ. ಇನ್ನು ದೇಗುಲದಲ್ಲಿ 14,000 ಕಾಂಟ್ರಾಕ್ಟ್ ನೌಕರರಿದ್ದಾರೆ. ಈ ಪೈಕಿ ಹಲವರಿಗೆ ಈ ನಿರ್ಧಾರದ ಬಿಸಿ ತಟ್ಟಲಿದೆ. ಖಾಯಂ ನೌಕಕರ ಪೈಕಿ 300 ಹಿಂದೂಯೇತರ ನೌಕರರು ಸ್ವಯಂ ನಿವೃತ್ತಿ ಘೋಷಿಸಬೇಕು, ಅಥವಾ ಆಂಧ್ರ ಪ್ರದೇಶ ಸರ್ಕಾರದ ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಆದೇಶಿಸಲಾಗಿದೆ.

 

ಹೊಸ ಚಂದ್ರಬಾಬು ನಾಯ್ಡು ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಭಾರಿ ಬದಲಾವಣೆಗೆ ಮುಂದಾಗಿತ್ತು. ಹಿಂದೂಯೇತರರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯತ್ವ ಪಡೆಯಲು, ಉದ್ಯೋಗ ಪಡೆಯಲು ಸಾಧ್ಯವಿಲ್ಲ. ತಿರುಪತಿ ದೇವಸ್ಥಾನ ಪಾವಿತ್ರ್ಯತೆ ಉಳಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಇದಕ್ಕೆ ತಿರುಪತಿ ದೇವಸ್ಥಾನದ ಲಡ್ಡುವಿನಲ್ಲಿ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಪತ್ತೆ ಆರೋಪ ಮತ್ತಷ್ಟು ಉತ್ತೇಜನ ನೀಡಿತ್ತು. ಈ ಘಟನೆ ಆಂಧ್ರ ಪ್ರದೇಶ ಮಾತ್ರವಲ್ಲ. ದೇಶಾದ್ಯಂತ ಭಾರಿ ಚರ್ಚೆಯಾಗಿತ್ತು. ಹಿಂದಿನ ವೈಎಸ್ಆರ್ ಜಗನ್‌ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ದನದ ಕೊಬ್ಬು ಹಾಗೂ ಮೀನಿನ ಎಣ್ಣೆಗಳನ್ನು ಲಡ್ಡುವಿಗೆ ಬಳಸಿತ್ತು ಅನ್ನೋ ಆರೋಪ ಕೋಲಾಹಲ ಸೃಷ್ಟಿಸಿತಿತ್ತು. ಕಡಿಮೆ ವೆಚ್ಚದಲ್ಲಿ ಲಡ್ಡು ತಯಾರಿಸಿದೆ. ದೇವಸ್ಥಾನದ ಪಾವಿತ್ರ್ಯತೆಯನ್ನು ಹಾಳು ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ದೇಶಾದ್ಯಂತ ಪ್ರತಿಭಟನೆಗಳು ನಡೆದಿತ್ತು. ಬಳಿಕ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ನೇತೃತ್ವದಲ್ಲಿ ದೇವಸ್ಥಾನ ಶುಚಿಗೊಳಿಸುವ ಕಾರ್ಯ ನಡೆದಿತ್ತು.

RELATED ARTICLES

Related Articles

TRENDING ARTICLES