Monday, November 18, 2024

ಕನಕದಾಸರ ಜಯಂತಿಗೆ ಸಚಿವ, ಶಾಸಕರು ಗೈರು: ಕಾಂಗ್ರೆಸ್​​ ಮುಖಂಡರಿಂದ ಆಕ್ರೋಶ

ವಿಜಯಪುರ : ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕನಕದಾಸರ ಜಯಂತಿಗೆ ಸಚಿವ ಎಂ ಬಿ ಪಾಟೀಲ್, ಶಾಸಕ ಯತ್ನಾಳ್ ಹಾಗೂ ಅಧಿಕಾರಿಳು ಗೈರಾಗಿದ್ದು ಅವರ ವಿರುದ್ಧ ಕಾಂಗ್ರೆಸ್​​ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು. ಕಾರ್ಯಕ್ರಮವನ್ನು ತ್ಯಜಿಸಿ ಅರ್ಧಕ್ಕೆ ಮುಖಂಡರು  ಹೊರ ಹೋಗಿದ್ದಾರೆ.

ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಯಾವುದೇ ನಾಯಕರು ಬರದ ಹಿನ್ನಲೆ ಘಟನೆ ನಡೆದಿದ್ದು. ಜಿಲ್ಲೆಯ ಸಚಿವರಾದ ಎಂ.ಬಿ ಪಾಟೀಲ್​, ಶಾಸಕ ಬಸನಗೌಡಪಾಟೀಲ್​ ಯತ್ನಾಳ್​, ಸೇರಿದಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಎಸ್​ಪಿ ಕೂಡ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಇದರಿಂದಾಗಿ ಕುರುಬ ಸಮಾಜದ ಮುಖಂಡರು ಅಕ್ರೋಶಗೊಂಡಿದ್ದರು. ಅವರನ್ನು ಸಮಾಧಾನ ಪಡಿಸಲು ಪೊಲೀಸರು, ಹಾಗೂ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ್ ಬಬಲೇಶ್ವರ ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಬೆರಳೆಣಿಕೆಯಷ್ಟು ಜನರ ಮಧ್ಯೆ ಕಾರ್ಯಕ್ರಮ ನಡೆದಿದೆ ಎಂದು ಮಾಹಿತಿ ದೊರೆತಿದೆ.

ಶಿಷ್ಟಾಚಾರದ ಪ್ರಕಾರ ಜನಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿರುತ್ತಾರೆ. ಶಾಸಕರು ಆಯಾ ತಾಲೂಕು ಮಟ್ಟದ ಕನಕದಾಸರ ಜಯಂತಿಯಲ್ಲಿ ಭಾಗಿಯಾಗಿರುತ್ತಾರ ಎಂದು ಸಂಗಮೇಶ್​ ಕಾಂಗ್ರೆಸ್​ ಮುಖಂಡರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಇದಕ್ಕೆ ಬಗ್ಗದ ಸಮುದಾಯದ ಮುಖಂಡರು ‘ಶಾಸಕರು ಸತ್ತಿದ್ದಾರೆ, ಅವರು ಇಂತಹ ಕಾರ್ಯಕ್ರಮಗಳಿಗೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

RELATED ARTICLES

Related Articles

TRENDING ARTICLES