ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ದರ್ಶನ್ ಜಾಮೀನು ರದ್ದುಗೊಳಿಸಬೇಕು ಎಂದು ತನಿಖಾಧಿಕಾರಿಗಳು ಮೇಲ್ಮನವಿ ಸಲ್ಲಿಸಲು ಸಿದ್ದತೆ ನಡೆಸಿದ್ದು. ಮೇಲ್ಮನವಿ ಸಲ್ಲಿಸಲು SPP ಪ್ರಸನ್ನಕುಮಾರ ದಾಖಲೆಯನ್ನು ಸಿದ್ದಪಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ನಟ ದರ್ಶನ್ ಜಾಮೀನು ರದ್ದುಕೋರಿ ಸುಪ್ರೀಂಕೋರ್ಟ್ ಮೇಲ್ಮನವಿಗೆ ಸಿದ್ದತೆ ಹಿನ್ನಲೆ. ಕಳೆದ 16 ದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಇರುವ ನಟ ದರ್ಶನ್ಗೆ ಡಾ.ಅಪ್ಪಾಜಿಗೌಡ ಟೀಂ ನಿಂದ ದರ್ಶನ್ಗೆ ಚಿಕಿತ್ಸೆ ನೀಡಲಾಗುತ್ತಿದ್ದು. ಸದ್ಯ ಕಳೆದ ಹತ್ತು ದಿನಗಳಿಂದ ಪಿಸಿಯೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.
ಈ ಮಧ್ಯೆ ತನಿಖಾಧಿಕಾರಿಗಳಿಗೆ ಗೃಹ ಇಲಾಖೆಯಿಂದ ಸುಪ್ರೀಂ ಗೆ ಎಸ್.ಎಲ್.ಪಿ (ಸ್ಪೆಷಲ್ ಲೀವ್ ಪೆಟಿಷನ್) ಸಲ್ಲಿಸಲು ಅನುಮತಿ ದೊರೆತಿದ್ದು ನವೆಂಬರ್ 18 ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಹಿರಿಯ ವಕೀಲ ರಘುಪತಿ ಮೇಲ್ಮನವಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ. ಹೈಕೋರ್ಟ್ ನಲ್ಲಿ ತನಿಖಾಧಿಕಾರಿಗಳ ಪರವಾಗಿ ವಾದ ಮಂಡಿಸಿದ್ದ ಎಸ್.ಪಿ.ಪಿ ಪ್ರಸನ್ನಕುಮಾರ್ ಸದ್ಯ ಪ್ರಸನ್ನಕುಮಾರ್ರಿಂದಲೇ ಮೇಲ್ಮನವಿ ಅರ್ಜಿಗೆ ಅಗತ್ಯವಾದ ಎಲ್ಲ ದಾಖಲೆ ಸಿದ್ದತೆ ನಡೆಸಿದ್ದಾರೆ.
ಆಪರೇಷನ್ ಮಾಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಯಲ್ಲಿ ನಟ ದರ್ಶನ್!
ಪಿಸಿಯೋಥೆರಪಿ ಜೊತೆಗೆ ಆಪರೇಷನ್ ಕೂಡ ದರ್ಶನ್ ಗೆ ಅಗತ್ಯ ಎನ್ನಲಾಗ್ತಿದೆ. ಆದರೆ ಸದ್ಯ ದರ್ಶನ್ ಮೆಡಿಕಲ್ ಕಂಡಿಷನ್ ಅಬ್ಸರ್ವೇಷನ್ನಲ್ಲಿ ಇದ್ದಾರೆ ಎಂದು ಮಾಹಿತಿ ದೊರೆತಿದೆ. ಮೊದಲಿಗೆ ನಟ ದರ್ಶನ್ ಸೇರಿ ಕುಟುಂಬಸ್ಥರು ಸಹ ಆಪರೇಷನ್ ಬದಲಿಗೆ ಪಿಸಿಯೋಥೆರಪಿ ಗೆ ಮನವಿ ಮಾಡಿದ್ರು, ಆದರೆ ಪಿಸಿಯೋಥೆರಪಿ ಬಳ್ಳಾರಿ ಜೈಲಿನಲ್ಲಿದ್ದುಕೊಂಡೆ ಚಿಕಿತ್ಸೆ ಪಡೆಯಲಿಕ್ಕೆ ಅವಕಾಶವಿದೆ .ದರ್ಶನ್ ಗೆ ತುರ್ತು ಆಪರೇಷನ್ ಅಗತ್ಯವಿದೆ ಎಂದು ಹೈಕೋರ್ಟ್ ನಲ್ಲಿ ಬೇಲ್ ಪಡೆಯಲಾಗಿತ್ತು.ಹೀಗಾಗಿ ಬೇಲ್ ಮೇಲೆ ಹೊರಬಂದು ಪಿಸಿಯೋಥೆರಪಿ ಚಿಕಿತ್ಸೆಗೆ ಒಳಪಟ್ಟಿದ್ರೆ ಬೇಲ್ ಕ್ಯಾನ್ಸಲ್ ಆಗುವ ಟೆನ್ಶನ್ ಅಲ್ಲಿ ದಾಸ ದರ್ಶನ್ ಇದ್ದಾನೆ ಎಂದು ಮಾಹಿತಿ ದೊರೆತಿದೆ.
ಸದ್ಯ ನಟ ದರ್ಶನ್ ಹಾಗೂ ಕುಟುಂಬಸ್ಥರು ಸಹ ಆಪರೇಷನ್ ಮಾಡಲಿಕ್ಕೆ ವೈದ್ಯರಿಗೆ ಸಮ್ಮತಿಸಿದ್ದಾರೆ ಎನ್ನಲಾಗ್ತಿದೆ. ಇನ್ನೆರಡು ದಿನಗಳಲ್ಲಿ ದರ್ಶನ್ ಗೆ ಆಪರೇಷನ್ ದಿನಾಂಕ ನಿಗದಿ ಮಾಡಲಿರೋ ವೈದ್ಯರು
ಆಪರೇಷನ್ ಗೂ ಮುನ್ನಾ ಮತ್ತೆ ಕೆಲ ಅಗತ್ಯ ಮೆಡಿಕಲ್ ಚೆಕಪ್ ನಡೆಸಲಿರೋ ವೈದ್ಯರು.
ಆಸ್ಪತ್ರೆಯಿಂದಲೇ ವಕೀಲರ ಮೊರೆ ಹೋದ ದರ್ಶನ್
ಸದ್ಯ ಮೇಲ್ಮನವಿ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಗೆ ಫುಲ್ ಟೆನ್ಶನ್ ಆಗಿದೆ ಎಂದು ಮಾಹಿತಿ ದೊರೆತಿದ್ದು. ತನಿಖಾಧಿಕಾರಿಗಳು ಮೇಲ್ಮನವಿಗೆ ಸಿದ್ದತೆ ನಡೆಸ್ತಿರೋ ಬಗ್ಗೆ ವಕೀಲರ ಜೊತೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಚರ್ಚೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ಒಂದು ವೇಳೆ ಸುಪ್ರೀಂ ಕೋರ್ಟ್ಗೆ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಕೆಯಾದಲ್ಲಿ ಪ್ರತಿಯಾಗಿ ಯಾವೆಲ್ಲ ಅಂಶಗಳನ್ನ ಉಲ್ಲೇಖ ಮಾಡಬೇಕು ಎಂದು ದರ್ಶನ ಪರ ವಕೀಲರು ಯೋಜನೆ ರೂಪಿಸಿದ್ದು.ಸದ್ಯದ ಹೆಲ್ತ್ ಕಂಡಿಷನ್ ರಿಪೋರ್ಟ್ ಫಿಸಿಯೋಥೆರಪಿ ವರದಿ ಅಥವಾ ಆಪರೇಷನ್ಗೆ ಒಳಗಾದ್ರೆ ಆಪರೇಷನ್ ನಂತರದ ಹೆಲ್ತ್ ರಿಪೋರ್ಟ್ ಸಲ್ಲಿಕೆ ಮಾಡೋದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.