ಮಂಡ್ಯ : ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಗೋಷ್ಠಿ ನಡೆಸಲು ಜಗದೀಶ್ ಕೊಪ್ಪ ಆಗ್ರಹಿಸಿದ್ದು.
ಮಂಡ್ಯದಲ್ಲಿ ಚಿಂತಕ ಜಗದೀಶ್ ಕೊಪ್ಪರಿಂದ ಟಿಪ್ಪು ಗೋಷ್ಠಿಗಾಗಿ ಆಗ್ರಹ ಕೇಳಿಬಂದಿದೆ. ಮಂಡ್ಯ, ಮೈಸೂರು ಆಸ್ಥಾನಕ್ಕೆ ಟಿಪ್ಪು ನೀಡಿದ ಕೊಡುಗೆ ಬಗ್ಗೆ ಗೋಷ್ಠಿ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿ ಮಾಡಿ ಮಾತನಾಡಿದ ಜಗದೀಶ್ ಕೊಪ್ಪ ‘ಟಿಫ್ಪು ಕೊಡುಗೆ ಬಗ್ಗೆ ಬ್ರಿಟೀಷರೆ ತಿಳಿಸಿದ್ದಾರೆ. ಮಂಡ್ಯ, ಮೈಸೂರು ರೈತರಿಗೆ ಟಿಪ್ಪು ಅಪಾರ ಕೊಡುಗೆ ನೀಡಿದ್ದಾರೆ, ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ.ಟಿಪ್ಪುವಿನ ಕೊಡುಗೆ ಬಗ್ಗೆ ನಾನೆ ಅನೇಕ ಪುಸ್ತಕ ಬರೆದಿದ್ದೇನೆ ಆದ್ದರಿಂದ ಈ ಬಾರಿ ಸಮ್ಮೇಳನದಲ್ಲಿ ಟಿಪ್ಪುವಿನ ಗೋಷ್ಟಿ ಆಗಲೇಬೆಕು’ ಎಂದು ಆಗ್ರಹಿಸಿದರು.
ಜಗದೀಶ್ ಕೊಪ್ಪ ಹೇಳಿಕೆಗೆ ಹಿಂದು ಸಂಘಟನೆಗಳ ತೀವ್ರ ವಿರೋಧ ವ್ಯಕ್ತಪಡಿಸಿದ್ದು. ಟಿಪ್ಪು ಸುಲ್ತಾನ್ ಕನ್ನಡ ದ್ರೋಹಿ, ಮತಾಂಧ. ಮೈಸೂರು ಪ್ರಾಂತ್ಯದಲ್ಲಿ ಪರ್ಸಿಯನ್ ಭಾಷೆಯನ್ನ ಏರಿದ ಕನ್ನಡ ವಿರೋಧಿ. ಇಂತ ಟಿಪ್ಪುವಿನ ಗೋಷ್ಠಿ ಮಾಡಲು ಮುಂದಾದ್ರೆ ಅದನ್ನ ತಡೆಯಲಿದ್ದೇವೆ ಎಂದು ಹಿಂದುಪರ ಸಂಘಟನೆಗಳ ಮುಂಖಂಡರಿಂದ ಆಕ್ರೋಶ ವ್ಯಕ್ತವಾಗಿದ್ದು ಮಂಡ್ಯ ಜಿಲ್ಲೆಯಾದ್ಯಂತ ಟಿಪ್ಪು ವಿಚಾರ ಬಾರೀ ಸದ್ದು ಮಾಡುತ್ತಿದೆ.