ಹರಿಯಾಣದ ಸರ್ಕಾರಿ ಶಾಲೆಯೊಂದು ಬೆಚ್ಚಿ ಬೀಳಿಸುವ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ವಿದ್ಯಾರ್ಥಿಗಳ ಅಟ್ಟಹಾಸಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ. ಹರಿಯಾಣದ ಭಿವಾನಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳು ಶಾಲೆಯಲ್ಲಿ ಅತ್ಯಂತ ಅಪಾಯಕಾರಿ ಕೃತ್ಯ ಎಸಗಿದ್ದಾರೆ. ಮಕ್ಕಳು ಪಟಾಕಿಯಂತಹ ಬಾಂಬ್ ಅನ್ನು ತಮ್ಮ ಸೈನ್ಸ್ ಶಿಕ್ಷಕರ ಕುರ್ಚಿಯ ಕೆಳಗೆ ಇರಿಸಿದ್ದರು. ಈ ವೇಳೆ ಶಿಕ್ಷಕಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಶಿಕ್ಷಣ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿದ್ದು, ಆರೋಪಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದೆ.
ವಾಸ್ತವವಾಗಿ ಈ ಘಟನೆ ನಡೆದಿದ್ದು ಹರಿಯಾಣದ ಭಿವಾನಿ ಜಿಲ್ಲೆಯ ಬೋಪಾರಾ ಗ್ರಾಮದಲ್ಲಿ. ಕಳೆದ ಶನಿವಾರ ಐದು ದಿನಗಳ ಹಿಂದೆ ಇಲ್ಲಿ 12ನೇ ತರಗತಿ ನಡೆಯುತ್ತಿತ್ತು. ಈ ವೇಳೆ ಮಕ್ಕಳು ಶಿಕ್ಷಕಿಯ ಕುರ್ಚಿಯ ಕೆಳಗೆ ಬಾಂಬ್ ಇಟ್ಟಿದ್ದರು. ಈ ಪಟಾಕಿಯಂತಹ ಬಾಂಬ್ ಸ್ಫೋಟಗೊಂಡ ನಂತರ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.