ಬೆಂಗಳೂರು: ಡಿ ಕೆ ಸುರೇಶ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ಯೋಗೇಶ್ವರ್ ಸಾಕಷ್ಟು ಚುನಾವಣೆ ಮಾಡಿದ್ದಾರೆ
ಫಲಿತಾಂಶ ಅವರ ಪರವಾಗಿರುತ್ತದೆ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ತಂತ್ರಗಾರಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಚುನಾವಣೆ ಮಾಡಿರುವ ನಮ್ಮೆಲ್ಲ ಕಾರ್ಯಕರ್ತರ ಮುಖಂಡರು ಬಹಳ ಆತ್ಮವಿಶ್ವಾಸದಿಂದ ಇದ್ದಾರೆ. ಯೋಗೇಶ್ವರ್ ಯಾವ ಆಯಾಮ ಇಟ್ಟುಕೊಂಡು ಹೇಳಿದ್ದಾರೆ ಗೊತ್ತಿಲ್ಲ, ಫಲಿತಾಂಶ ಕಾಂಗ್ರೆಸ್ ಪಕ್ಷದ ಪರವಾಗಿ ಇರುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಜಮೀರ್ ಅಹಮದ್ ಕುಮಾರಸ್ವಾಮಿಯವರ ಆತ್ಮೀಯ ಸ್ನೇಹಿತರು, ಅವರ ಹೇಳಿಕೆ ಹೊಸದೇನೂ ಅಲ್ಲ
ಆದರೆ ಚುನಾವಣೆಗೆ ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ
ಚುನಾವಣೆ ಮೇಲೆ ಪ್ರಚಾರ ಬೀರಬೇಕು ಎಂಬ ಕಾರಣಕ್ಕೇ, ಮಾಧ್ಯಮಗಳು ಯಾಕೆ ಅಷ್ಟೊಂದು ಅವರ ಹಳೆಯ ಹೇಳಿಕೆಯನ್ನು ಪ್ರಚಾರ ಮಾಡಿದರು? ಇವತ್ತೊಂದೇ ಸಲ ಝಮೀರ್ ಮಾತಾಡಿಲ್ಲ ನಮ್ಮ ಮೇಲಿನ ಕೋಪನಾ ಮಾಧ್ಯಮಗಳಿಗೆ ಎಂದು ನನಗಂತೂ ಅನಿಸುತ್ತಿದೆ ಎಂದು ಹೇಳಿದರು.
ಜಮೀರ್ ಅಹಮದ್ ಮಾತು ವೈಯಕ್ತಿಕ ಹೇಳಿಕೆಯಾಗಿದೆ. ಜಮೀರ್ ಹೇಳಿಕೆಯನ್ನು ಚರ್ಚೆ ಮಾಡುವ ಹಾಗೆ ಮಾಡಿದ್ದು ಮಾಧ್ಯಮದವರು ಎಂದು ಹೇಳಿದರು. ಡಿಕೆ ಶಿವಕುಮಾರ್ ರನ್ನು ಕಳ್ಳ ಅಂತ ಕುಮಾರಸ್ವಾಮಿ ಕರೆದಾಗ ಮಾಧ್ಯಮಗಳು ಇದನ್ನು ಚರ್ಚೆ ಮಾಡಲಿಲ್ಲ, ನೂರು ರೂಪಾಯಿಗೆ ಕೂಲಿಗೆ ಇದ್ದ ಎಂಬುದನ್ನು ತೋರಿಸಲಿಲ್ಲ ಮಾಧ್ಯಮಗಳು ನಿಮ್ಮ ಮೌಲ್ಯಗಳನ್ನೂ ಕೂಡ ಪ್ರಶ್ನೆ ಮಾಡಬೇಕಾದ ಸಮಯ ಬಂದಿದೆ ಎಂದು
ಮಾಧ್ಯಮಗಳ ವಿರುದ್ದವೇ ಡಿಕೆ ಸುರೇಶ್ ಗರಂ ಆದರು.