ಬೆಂಗಳೂರು : ಕೇಂದ್ರ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುಧ್ದ ಎಫ್ಐಆರ್ ದಾಖಲಾಗಿದ್ದು. ಐಪಿಎಸ್ ಆಧಿಕಾರಿ ಚಂದ್ರಶೇಖರ್ಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕುಮಾರಸ್ವಾಮಿ ಸೇರಿದಂತೆ ಮೂರು ಜನರ ವಿರುಧ್ದ ಪ್ರಥಮ ವರ್ತಮಾನ ವರದಿ ದಾಖಲಾಗಿದೆ(FIR).
ಕಳೆದ ತಿಂಗಳು ಲೋಕಾಯುಕ್ತ ವಿಚಾರಣೆ ಎದುರಿಸಿದ್ದ ಕುಮಾರಸ್ವಾಮಿ ನಂತರ ಸುದ್ದಿಗೋಷ್ಟಿ ಮಾಡಿ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ದ ಆರೋಪಗಳ ಸುರಿಮಳೆ ಸುರಿಸಿದ್ದರು. ಇದರಿಂದ ಬೇಸತ್ತಿದ್ದ ಎಡಿಜಿಪಿ ತಮ್ಮ ಸಿಬ್ಬಂದಿ ವರ್ಗಕ್ಕೆ ಪತ್ರಬರೆದು ಇಂತಹ ಆರೋಪಗಳಿಗೆ ಕಿವಿಕೊಡದೆ ಕೆಲಸ ಮಾಡಿ ಎಂದು ಹೇಲಿದ್ದರು ಅದರ ಜೊತೆಗೆ ಬರ್ನಾಡ್ ಷಾ ಹೇಳಿರುವ ವಾಕ್ಯವನ್ನು ಉಲ್ಲೇಖಿಸುವ ಮೂಲಕ ಕುಮಾರಸ್ವಾಮಿಯನ್ನು ಹಂದಿಗೆ ಹೋಲಿಕೆ ಮಾಡಿದ್ದರು. ಇದಕ್ಕೆ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದರು.
ಇದೇ ವಿಚಾರಕ್ಕೆ ಇಂದು ಐಪಿಎಸ್ ಅಧಿಕಾರಿ ಚಂದ್ರಶೇಖರ್ ಸಂಜಯ್ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು. ತಮ್ಮ ಎಫ್ಆರ್ನಲ್ಲಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಮತ್ತು ಸುರೇಶ್ಬಾಬು ಎಂಬುವವರು ನನಗೆ ಬೆದರಿಕೆ ಹಾಕಿದ್ದಾರೆ, ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿದ್ದಾರೆ ಹಾಗೂ ಲಂಚ ಪಡೆದ ಆರೋಪ ಮಾಡಿದ್ದಾರೆ ಎಂದು ಪ್ರಕರಣ ದಾಕಲು ಮಾಡಿಕೊಂಡಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಸಂಜಯ್ನಗರ ಪೋಲಿಸರು ಕುಮಾರಸ್ವಾಮಿ, ನಿಖಿಲ್ಕುಮಾರ್ಸ್ವಾಮಿ ಮತ್ತು ಕುಮಾರಸ್ವಾಮಿ ಆಪ್ತ ಸುರೇಶ್ಬಾಬುರನ್ನ ಆರೋಪಿಗಳನ್ನಾಗಿ ಮಾಡಿಕೊಂಡಿದ್ದಾರೆ.