Friday, November 22, 2024

ಜಾರ್ಖಂಡ್​ನಲ್ಲಿ ಎನ್​ಡಿಎ ಸರ್ಕಾರ ರಚನೆ ಮಾಡುವುದು ನಿಶ್ಚಿತ : ಪ್ರಧಾನಿ ನರೇಂದ್ರ ಮೋದಿ

ಜಾರ್ಖಂಡ್: ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಎನ್​​​ಡಿಎ ದಾಖಲೆಯ ಪ್ರಮಾಣದಲ್ಲಿ ಜಯಗಳಿಸಿ, ಅಧಿಕಾರಕ್ಕೆ ಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಾರ್ಖಂಡ್​ ನ ಕೊಲ್ಹಾನ್​ ನಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿಗೆ ಜಾರ್ಖಂಡ್​ ನಲ್ಲಿ ತಾವು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದು, ಬೆಳಗ್ಗಿನಿಂದ ಎರಡು ರಾಲಿಗಳಲ್ಲಿ ಭಾಗವಹಿಸಿದ್ದೇನೆ. ಎರಡೂ ರಾಲಿಗಳಲ್ಲಿ ಭಾಗವಹಿಸಿದ್ದ ಜನರ ಮೂಡ್ ಗಮನಿಸಿದರೆ, ಈ ಬಾರಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಇತಿಹಾಸ ನಿರ್ಮಿಸುತ್ತದೆ ಎಂದು ತಮಗೆ ಖಚಿತವಾಗುತ್ತಿದೆ ಎಂದರು.

ಬಿಜೆಪಿಯು ಜಾರ್ಖಂಡ್ ನ ಆದಿವಾಸಿಗಳು, ಬಡವರು, ದಲಿತರ ಪರವಾಗಿ ಕೆಲಸ ಮಾಡುತ್ತದೆ. ಕೇಂದ್ರದಲ್ಲಿ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚನೆ ಮಾಡಿದಾಗ ಮಾಡಿದ ಮೊದಲ ಕೆಲಸವೆಂದರೆ ರಾಜ್ಯಗಳಲ್ಲಿ ಆದಿವಾಸಿ ಸಂಘಗಳ ಸ್ಥಾಪನೆ ಮಾಡಿದ್ದು. ಆದಿವಾಸಿ ಸಮುದಾಯದ ಸಹೋದರ ಸಹೋದರಿಯರ ಆಶೋತ್ತರಗಳು ಹಾಗೂ ಸ್ವಾಭಿಮಾನವನ್ನು ಬಿಜೆಪಿ ಸದಾಕಾಲ ಗೌರವಿಸುತ್ತದೆ.

ಆದಿವಾಸಿ ಸಮುದಾಯಗಳಿಗಾಗಿಯೇ ಜಾರ್ಖಂಡ್​ ಮತ್ತು ಛತ್ತೀಸ್ ಗಢ ಎರಡು ರಾಜ್ಯಗಳ ರಚನೆ ಮಾಡಲಾಯಿತು. ಈ ಶ್ರೇಯಸ್ಸು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಈಗಲೂ ಜಾರ್ಖಂಡ್​ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಕ್ರಮ ವಲಸೆಗೆ ಕಡಿವಾಣ ಹಾಕಲಾಗುತ್ತದೆ, ಆದಿವಾಸಿ ಸಮುದಾಯದ ಹೆಣ್ಣುಮಕ್ಕಳ ಭೂಮಿ ಕಸಿದುಕೊಳ್ಳುವ ಪ್ರವೃತ್ತಿಯನ್ನು ತಡೆಗಟ್ಟಿ ಅವರ ಪಾಲಿನ ಭೂಮಿ ಅವರಿಗೆ ಉಳಿದುಕೊಳ್ಳುವ ಹಾಗೆ ಕಾನೂನು ರೂಪಿಸಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ

RELATED ARTICLES

Related Articles

TRENDING ARTICLES