ದಾವಣಗೆರೆ : ಮಾಜಿ ಸಚಿವ ರೇಣುಕಾಚಾರ್ಯ ಸಿಎಂ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿದ್ದು. ಸಿದ್ದರಾಮಯ್ಯನ ಕುರ್ಚಿಗೆ ಕಂಟಕ ಎದುರಾಗಿದೆ. ಉಪಚುನಾವಣೆ ಮುಗಿದ ಕೂಡಲೆ ನಿಮ್ಮನ್ನು ನಿಮ್ಮ ಪಕ್ಷದವರೆ ಕೆಳಗಿಳಿಸುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರವದಿಯಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ. ಸಿಎಂ ಮೇಲೆ ಮೂಡಾ ಹಗರಣದಲ್ಲಿ ಕಾನೂನು ತೂಗುಕತ್ತಿ ನೇತಾಡುತ್ತಿದೆ. ಸಿಎಂ ಉಪ ಚುನಾವಣೆಗೋಸ್ಕರ ರೈತರ ಕಣ್ಣೋರಿಸುವ ಕೆಲಸ ಮಾಡುತ್ತಿದ್ದಾರೆ.ವಕ್ಫ್ ಬೋರ್ಡ್ನ ಹೆಸರು ರೈತರ ಪಹಣಿಯಲ್ಲಿ ಬಂದಿದೆ. ಇದನೆಲ್ಲಾ ನೋಡಿದ ಮೇಲೆ ರಾಜ್ಯದಲ್ಲಿಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ಯೋ ಇಲ್ಲ ಮತಾಂದ ಜಮೀರ್ ನ ಸರ್ಕಾರ ಇದ್ಯೋ ಎಂದು ಪ್ರಶ್ನಿಸಿದರು.
ಮುಂದಿವರಿದು ಮಾತನಾಡಿದ ರೇಣುಕಾಚಾರ್ಯ, ಜಮೀರ್ ಹೀಗೆ ಹುಚ್ಚಾಟ ನಡೆಸಿದರೆ ಪಾಕಿಸ್ತಾನಕ್ಕೆ ಓಡಿಸುತ್ತೇವೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.ವಕ್ಫ್ ಬೋರ್ಡ್ ಕಾನೂನನ್ನು ತಿದ್ದುಪಡಿ ಮಾಡಲು ನರೇಂದ್ರ ಮೋದಿಯವರಿಗೆ ಎಲ್ಲರು ಬೆಂಬಲ ನೀಡಬೇಕು ಆ ಆಸ್ತಿಯನ್ನು ಬಡವರಿಗೆ ಸರ್ಕಾರದ ಕಟ್ಟಡ ನಿರ್ಮಾಣ ಮಾಡಲು ನೀಡಬೇಕು. ಅದ್ದರಿಂದ ನಾವೆಲ್ಲರು ಪತ್ರ ಚಳುವಳಿಗೆ ಮುಂದಾಗಬೇಕಿದೆ
ನಾನು ಕೂಡ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದೇನೆ. ನಿಮ್ಮ ಸರ್ಕಾರ ರೈತರಗೆ ಪರಿಹಾರಕ್ಕೆ, ಅಭಿವೃದ್ಧಿಗೆ ಹಣ ಬಿಡುಗಡೆ ಮಾಡೋದಿಲ್ಲ. ಆದರೆ ವಕ್ಫ್ ಆಸ್ತಿ ರಕ್ಷಣೆ ಮಾಡಲು 35 ಸಾವಿರ ಕೋಟಿ ಹಣ ಬಿಡುಗಡೆ ಮಾಡುತ್ತೀರಿ. ಐದು ಗ್ಯಾರೆಂಟಿಯಂತೆ ಆರನೇ ಗ್ಯಾರೆಂಟಿ ವಕ್ಫ್ ಬೋರ್ಡ್ ಆಸ್ತಿಯನ್ನು ಉಳಿಸೋದು ಎಂದು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.