ದೆಹಲಿ : ದೆಹಲಿಯಲ್ಲಿ ವಿಪರೀತ ವಿಷಮಯುಕ್ತ ಗಾಳಿ ಹಿನ್ನೆಲೆ ಜನರು ಹೊರಗೆ ಒಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಮಯುಕ್ತ ಗಾಳಿ ಹತೋಟಿಗೆ ತರಲು ದೆಹಲಿ ಸರ್ಕಾರ ಶತ ಪ್ರಯತ್ನ ಮಾಡುತ್ತಿದ್ದು ಸರ್ಕಾರ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಸಚಿವ ಗೋಪಾಲ್ ರಾಯ್ ಮಾಹಿತಿ ನೀಡಿದರು.
ನಾಲ್ಕು ದಿನಗಳ ಹಿಂದೆ ದೆಹಲಿಯಲ್ಲಿ ಎಕ್ಯೂಐ (ವಾಯು ಮಾಲಿನ್ಯ ಸೂಚ್ಯಾಂಕ) 350ರ ಗಡಿ ದಾಟಿತ್ತು
ದೀಪಾವಳಿಯ ಮರುದಿನ ಎಕ್ಯೂಐ 400 ರ ಗಡಿ ದಾಟುತ್ತದೆ ಅಂತಾ ಅಂದಾಜಿಸಲಾಗಿತ್ತು ಆದರೆ
ನಮ್ಮ ನಿರೀಕ್ಷೆ ಹುಸಿಯಾಗಿದೆ ಅದಕ್ಕಾಗಿ ದೆಹಲಿಯ ಸಾರ್ವಜನಿಕರಿಗೆ ನಾನು ಧನ್ಯವಾದ ಹೇಳುತ್ತೇನೆ
ಜನರ ಸಂಯೋಜಿತ ಪ್ರಯತ್ನದಿಂದಾಗಿ ಇಂದು ದೆಹಲಿಯಲ್ಲಿ AQI 360 ಆಗಿದೆ ಎಂದು ಸಚಿವ ಗೋಪಾಲ್ ರಾಯ್ ಹೇಳಿದರು.
ದೆಹಲಿಯಲ್ಲಿನ ಮಾಲಿನ್ಯವನ್ನು ನಿಯಂತ್ರಿಸಲು, AAP ಸರ್ಕಾರವು ನಾನಾ ಯೋಜನೆ ಹಾಕಿಕೊಂಡಿದೆ
ದೆಹಲಿಯಲ್ಲಿ ನೀರು ಚಿಮುಕಿಸುವ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಪಾಳಿಯಲ್ಲಿ ನೀರು ಚುಮುಕಿಸಲಾಗುವುದು. ನೀರು ಚಿಮುಕಿಸುವ ಎರಡು ಮೊಬೈಲ್ ಆ್ಯಂಟಿ ಸ್ಮಾಗ್ ಗನ್‌ಗಳನ್ನು ನಿಯೋಜಿಸಲಾಗುವುದು, ಇಡೀ ದೆಹಲಿಯಾದ್ಯಂತ 200 ಮೊಬೈಲ್ ಆ್ಯಂಟಿ ಸ್ಮಾಗ್ ಗನ್‌ಗಳನ್ನು ನಿಯೋಜಿಸಲಾಗುವುದು ಎಂದು ಸರ್ಕಾರದ ಯೋಜನೆಗಳ ಬಗ್ಗೆ ಸಾರಿಗೆ ಸಚಿವ ಗೋಪಾಲ್ ರಾಯ್ ಮಾಹಿತಿ ನೀಡಿದರು.