Tuesday, December 3, 2024

ಏಷ್ಯಾದ ಅತಿ ದೊಡ್ಡ ವಿಮಾನ ನಿಲ್ಧಾಣ ಉದ್ಘಾಟನೆಗೆ ದಿನಗಣನೆ ಆರಂಭ

ನೋಯ್ಡಾ : ಬಹುನಿರೀಕ್ಷಿತ ಯೋಜನೆಯಾದ ಏಷ್ಯಾದ ಅತೀ ದೊಡ್ಡ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮುಂದಿನ ವರ್ಷ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ವರದಿ ತಿಳಿಸಿದೆ. ನೋಯ್ತಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಉದ್ಘಾಟನೆಯ ಅಧಿಕೃತ ದಿನಾಂಕ ಘೋಷಿಸಿದ್ದು, ವಿಮಾನ ನಿಲ್ದಾಣದಲ್ಲಿ 2025ರ ಏಪ್ರಿಲ್ 17ರಿಂದ ವಿಮಾನ ಸಂಚಾರ ಆರಂಭವಾಗಲಿದ್ದು, ಒಟ್ಟು ವಿವಿಧ ಭಾಗಗಳಿಂದ 30 ವಿಮಾನಗಳು ಸಂಚರಿಸಲಿವೆ ಎಂದು ವರದಿ ತಿಳಿಸಿದೆ.

ವಿಮಾನ ನಿಲ್ದಾಣ ಕಾರ್ಯ ತ್ವರಿತಗತಿಯಲ್ಲಿ ಸಾಗಿದ್ದು, ಈ ವಿಮಾನ ನಿಲ್ದಾಣ ಉತ್ತರಪ್ರದೇಶದ ಗೌತಮ್ ಬುದ್ಧ ನಗರದಲ್ಲಿದ್ದು, ಮಹತ್ವಕಾಂಕ್ಷೆಯ ಯೋಜನೆ ಆಗ್ರಾ, ಮಥುರಾ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸಲು ಅನುಕೂಲವಾಗಲಿದೆ ಎಂದು ವರದಿ ತಿಳಿಸಿದೆ. ನೋಯ್ದಾ ವಿಮಾನ ನಿಲ್ದಾಣದ ಹೆಚ್ಚಿನ ವಿಮಾನ ಸಂಚಾರ ಯೋಜನೆ ನೋಯ್ತಾ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣ ದೆಹಲಿ-ಎನ್​ಸಿಆರ್ ಪ್ರದೇಶದ ಎರಡನೇ ವಿಮಾನ ನಿಲ್ದಾಣವಾಗಿದ್ದು, ಪ್ರತೀ ದಿನ 65 ವಿಮಾನ ಸಂಚಾರದ ಯೋಜನೆ ಹೊಂದಿದ್ದು, ಇದರಲ್ಲಿ 62 ದೇಶಿಯ, ಎರಡು ಅಂತರಾಷ್ಟ್ರೀಯ ಹಾಗೂ ಒಂದು ಸರಕು ಸಾಗಣೆ ಮಾರ್ಗ ಹೊಂದಿರಲಿದೆ ಎಂದು ವರದಿ ವಿವರಿಸಿದೆ.

RELATED ARTICLES

Related Articles

TRENDING ARTICLES