Friday, November 22, 2024

ಮಂಡ್ಯದ ದೇವಸ್ಥಾನಕ್ಕೂ ಕಾಲಿಟ್ಟ ವಕ್ಫ್​ : ದೇವಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಗ್ರಾಮಸ್ಥರು

ಮಂಡ್ಯ : ರಾಜ್ಯದಲ್ಲಿ ಕೆಲವು ದಿನಗಳಿಂದ ವಕ್ಫ್​ ಕಂಟಕ ರಾಜ್ಯದ ಜನರಿಗೆ ಬಿಟ್ಟು ಬಿಡದಂತೆ ಕಾಡುತ್ತಿದೆ. ಬೀದರ್​, ವಿಜಯಪುರ, ಕಲಬುರಗಿ ಈ ರೀತಿನ ಉತ್ತರ ಕರ್ನಾಟಕದಲ್ಲಿ ಆವರಿಸಿದ್ದ ವಕ್ಫ್​ ಭೂತ ಇದೀಗ ಹಳೆ ಮೈಸೂರು ಭಾಗಕ್ಕೂ ಆವರಿಸಿದೆ. ಮಂಡ್ಯ ಜಿಲ್ಲೆಯ ಮಹದೇವಪುರ ಗ್ರಾಮದಲ್ಲಿನ ದೇವಸ್ಥಾನ  ವಕ್ಫ್​ಗೆ ಸೇರಿದೆ ಎಂದು ಘೋಶಿಸಿಕೊಂಡಿದ್ದಾರೆ.

ಮಹದೇವಪುರ ಗ್ರಾಮದ ಚಿಕ್ಕಮ್ಮ ಚಿಕ್ಕದೇವಿ ದೇಗಲದ ಜಾಗದ ಮೇಲೆ ವಕ್ಫ್ ಬೋರ್ಡ್ ಕಣ್ಣಾಕಿದ್ದು. ದೇಗುಲ ಇರುವ ಜಾಗದ RTC ಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಘಟನೆಯಾಗಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಸಿದ್ದಾರೆ.

ಮನೆ ದೇವರ ಮೇಲೆ ಕಣ್ಣು ಹಾಕಿದ ವಕ್ಫ್ ಬೋರ್ಡ್ ವಿರುದ್ದ ಗ್ರಾಮಸ್ಥರ ಆಕ್ರೋಶ ವ್ಯಕ್ತ ಪಡಿಸಿದ್ದು. ಗ್ರಾಮಸ್ಥರು ಶ್ರೀರಂಗಪಟ್ಟಣದ ತಹಶೀಲ್ದಾರ್​ಗೆ ದೂರು ನೀಡಿದ್ದಾರೆ. ಗ್ರಾಮದ ದೇವಸ್ಥಾನದ  RTCಯಲ್ಲಿ ವಕ್ಫ್​​ ಎಂದು ನಮೂಸಿದ್ದು. ಇದರಿಂದ ಆತಂಕಕ್ಕೆ ಒಳಗಾದ ಗ್ರಾಮಸ್ಥರು ತಮ್ಮ ಜಮೀನಿನ ಪಹಣಿ ತೆಗೆದು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES