Thursday, October 31, 2024

ಅಜಾಗಾರೂಕತೆಯಿಂದ ವಾಹನ ಚಾಲನೆ : ಮೂವರು ಪಾದಚಾರಿಗಳು ದುರ್ಮರಣ

ಆನೇಕಲ್ : ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಮೂವರು ದುರ್ಮರಣ ,ಮೂವರಿಗೆ ಗಂಭೀರ ಗಾಯವಾದ ಘಟನೆ ಬೆಂಗಳೂರಿನ ಹೊರವಲಯ ಆನೇಕಲ್ ತಾಲೂಕಿನ ಹಾರಗದ್ದೆ ಗೇಟ್ ಎಂಬಲ್ಲಿ ನಡೆದಿದೆ ಪ್ರಕರಣ ಸಂಬಂಧ ಜಿಗಣಿ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಟಿಟಿಯಲ್ಲಿ ಮಹಿಳೆಯರನ್ನ ಕೂರಿಸಿಕೊಂಡು ವಾಹನ ಚಲಿಸುತ್ತಿದ್ದ ಚಾಲಕ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುತ್ತಿದ್ದ ಎಂಬ ಮಾಹಿತಿ ದೊರೆತಿದೆ. ಆನೇಕಲ್ ಮತ್ತು ಜಿಗಣಿ‌ ಮುಖ್ಯರಸ್ತೆ ಹೋಗುತ್ತಿದ್ದ ಟೆಂಪೋ ಟ್ರಾವೆಲ ಪಾದಾಚಾರಿಗಳ ಬಳಿ ಹುಡುಗಾಟ ಆಡಲು ಹೋಗಿ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ದೊರೆತಿದೆ.

ಅಪಘಾತದಲ್ಲಿ 3 ಪಾದಚಾರಿಗಳು ದುರ್ಮರಣ ಹೊಂದಿದ್ದು,ಉಳಿದ ಮೂವರಿಗೆ ಗಂಭೀರ ಗಾಯವಾಗಿದೆ.
ಚಾಲಕನ ಅಜಾಗರೂಕತೆಯಿಂದಲೇ ಮೂರು ಜನ ದುರ್ಮರಣಬ ಹೊಂದಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿದೆ. ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಜಿಗಣಿಯ ವಿಜಯಶ್ರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ಪರಿಶೀಲನೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES