ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಜನರಿಗೆ ಬೆಲೆ ಏರಿಕೆ ಶಾಕ್ ನೀಡಿದ್ದು, ರಾಜ್ಯದಲ್ಲಿ ಕಳೆದ ಕೆಲದಿನಗಳಿಂದ ಬಿದ್ದ ಹಿಂಗಾರು ಮಳೆ ಎಫೆಕ್ಟ್ನಿಂದಾಗಿ ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆಯಾಗದೆ ಜನರ ಜೇಬಿಗೆ ಕತ್ತರಿ ಬೀಳುವಂತಾಗುದೆ.
ರಾಜ್ಯದಲ್ಲಿ ಹಿಂಗಾರು ಮಳೆ ಎಫೆಕ್ಟ್ಗೆ ಗ್ರಾಹಕರು ಹೈರಾಣಾಗಿದ್ದು. ದೀಪಾವಳಿ ಸಮೀಪ ಬೆನ್ನಲ್ಲೇ ತರಕಾರಿಗೆ
ಬೇಡಿಕೆ ಹೆಚ್ಚಾಗಿದ್ದು, ತರಕಾರಿ ಪೂರೈಕೆಯಾಗದ ಹಿನ್ನೆಲೆ ಬೆಲೆ ಏರಿಕೆ ಆಗಿದೆ. ಜೊತೆಗೆ ಮಳೆಯಿಂದಾಗಿ ಸಾಕಷ್ಟು ತರಕಾರಿಗಳು ನಷ್ಟ ಹಿನ್ನೆಲೆ. ಒಂಬತ್ತು ತಿಂಗಳಲ್ಲಿ ಮೊದಲ ಬಾರಿಗೆ ತರಕಾರಿ ಹಣದುಬ್ಬರ 9.24ಕ್ಕೆ ಏರಿಕೆ
ದೈನಂದಿನ ಅಡುಗೆಗೆ ಬೇಕಾದ ಈರುಳ್ಳಿ, ಆಲೂಗೆಡ್ಡೆ, ಟೊಮ್ಯಾಟೊ ದರಗಳ ಏರಿಕೆಯಿಂದ ಗ್ರಾಹಕರು ಸಂಕಷ್ಟದಲ್ಲಿದ್ದಾರೆ. ಬೆಳ್ಳುಳ್ಳಿ ಕೆಜಿಯೊಂದಕ್ಕೆ 320 ರೂಪಾಯಿಂದ 440 ರೂಪಾಯಿ ದರ ತಲುಪಿದ್ದು.
80ರ ಆಸುಪಾಸಿನಲ್ಲಿ ಈರುಳ್ಳಿ ಇದೆ.
ಸದ್ಯ ಯಾವ್ಯಾವ ತರಕಾರಿ ದರ ಎಷ್ಟಿದೆ..? (ಕೆಜಿಗೆ )
ದಪ್ಪ ಈರುಳ್ಳಿ : 70- 80 ರೂ
ಸಾಂಬಾರ್ ಈರುಳ್ಳಿ : ರೂ. 100 ರೂ
ಟೊಮೆಟೊ : 50-60 ರೂ
ಹಸಿ ಮೆಣಸಿನಕಾಯಿ : ರೂ. 80 ರೂ
ಬೀಟ್ರೋಟ್ : 80 ರೂ
ಆಲೂಗೆಡ್ಡೆ : 70 ರೂ
ಕ್ಯಾಪ್ಸಿಕಾಮ್ : 65 ರೂ
ಹಾಗಲಕಾಯಿ : 65 ರೂ
ಬೀನ್ಸ್ : 80 ರೂ
ಡಬಲ್ ಬೀನ್ಸ್ : 120 ರೂ
ಕ್ಯಾಬೆಜ್ : 50 ರೂ
ಸೌತೇಕಾಯಿ : 60 ರೂ
ಬದನೇಕಾಯಿ : 60 ರೂ
ಸುವರ್ಣಗೆಡ್ಡೆ : 70 ರೂ
ಶುಂಠಿ : 100 ರೂ
ಲಿಂಬೆಕಾಯಿ : 140 ರೂ ಒಂದಕ್ಕೆ 7ರಿಂದ 8ರೂ
ಮಾವಿನಕಾಯಿ : 150 – 250 ರೂ
ಬೆಂಡೆಕಾಯಿ : 60 ರೂ
ಕ್ಯಾರೆಟ್ : 65 ರೂ