ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದಂತೆ ಎಲ್ಲೆಲ್ಲೂ ಪಟಾಕಿ ಸದ್ದು ಜೋರಾಗುತ್ತದೆ. ಮಕ್ಕಳು, ದೊಡ್ಡವರೆನ್ನದೆ ಎಲ್ಲರಿಗು ಇಷ್ಟವಾಗುವ ವಸ್ತುವೆಂದರೆ ಅದು ಪಟಾಕಿಯಾಗಿದ್ದು. ಈ ಪಟಾಕಿಗಳಿಂದ ಅನೇಕ ಜನರು ಹಾನಿಗೊಳಗಾಗಿದ್ದಾರೆ. ಅದಕ್ಕಾಗಿಯೇ ಈ ಬಾರಿ ದೀಪಾವಳಿ ಹಬ್ಬಕ್ಕೂ ಮುನ್ನ ಸರ್ಕಾರ ನೇತ್ರಾಲಯಗಳನ್ನು ಸಕಲ ರೀತಿಯಲ್ಲಿ ಸಿದ್ದಪಡಿಸಿಕೊಂಡಿದೆ.
ಪಟಾಕಿ ಅವಘಡದಿಂದ ಗಾಯಗೊಂಡವರಿಗೆ ಸೇವೆ ನೀಡಲು ಹೆಚ್ಚಿನ ನಿಗಾಘಟಕಗಳನ್ನು ಸ್ಥಾಪಿಸಿದ್ದು. 24 ಗಂಟೆಗಳ ಕಾಲ ಆಸ್ಪತ್ರೆಯನ್ನು ತೆರೆದಿಡಲು ಯೋಜನೆ ರೂಪಿಸಲಾಗಿದೆ. ವಿಷೇಷವಾಗಿ ಸುಟ್ಟಗಾಯ ಹಾಗೂ ಕಣ್ಣಿನ ವಿಭಾಗಗಳಲ್ಲಿ ಹೆಚ್ಚಿನ ನಿಗಾವಹಿಸಿದ್ದು. ಮಿಂಟೋ ಸೇರಿದಂತೆ ಹಲವೂ ಆಸ್ಪತ್ರೆಗಳಲ್ಲಿ ಪಟಾಕಿ ವಾರ್ಡ್ಗಳನ್ನು ನಿರ್ಮಾಣ ಮಾಡಿದ್ದಾರೆ.
ಪಟಾಕಿಯಿಂದ ಗಾಯಗೊಂಡಿರುವ ಗಾಯಳುಗಳಿಗೆ ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದ್ದು.ಹಗಲು ರಾತ್ರಿ ಕಾರ್ಯ ನಿರ್ವಹಿಸಲು ವೈದ್ಯರಿಗೆ ಸೂಚನೆ ನೀಡಲಾಗಿದೆ.ಗಾಯಳುಗಳಿಗೆ ನೀಡಲು ಸಂಪೂರ್ಣ ಔಷಧಿ ವ್ಯವಸ್ಥೆ ಮಾಡಿಕೊಂಡಿರುವ ಆಸ್ಪತ್ರೆಗಳು ಇಂದಿನಿಂದಲೇ ಕೆಲ ಆಸ್ಪತ್ರೆಗಳಲ್ಲಿ ಪಟಾಕಿ ವಾರ್ಡ್ ಆರಂಭಿಸಿದ್ದಾರೆ.
ಪಟಾಕಿ ಗಾಯಳುಗಳಿಗೆ 24 ಚಿಕಿತ್ಸೆ ನೀಡಲು ಕೆಲ ಖಾಸಗಿ ಆಸ್ಪತ್ರೆಗಳಲ್ಲೂ ತಯಾರಿ ಮಾಡಿದ್ದು. ಆದಷ್ಟೂ ಪಟಾಕಿ ಕಮ್ಮಿ ಸಿಡಿಸಲು,ಎಚ್ಚರಿಕೆ ವಹಿಸಲು ವೈದ್ಯರಿಂದ ಸೂಚನೆ ನೀಡಿದ್ದಾರೆ. ಇಂದು ಈ ಬಗ್ಗೆ ಅಧಿಕೃತವಾಗಿ ಮಿಂಟೋ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜು ನೇತೃತ್ವದಲ್ಲಿ ಸುದ್ದಿಗೋಷ್ಟಿ ನಡೆಯಲಿದ್ದು. ಈ ಸುದ್ದಿಗೋಷ್ಟಿಯಲ್ಲಿ ಎಲ್ಲಾ ಮಾಹಿತಿಗಳನ್ನು ನೀಡುತ್ತಾವೆ ಎಂದು ಮಾಹಿತಿ ನೀಡಿದ್ದಾರೆ.