ಬೆಂಗಳೂರು : ಕರ್ನಾಟಕದ ಉಪಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದ್ದು. ಒಂದು ಕಡೆ ಕುಮಾರ್ಸ್ವಾಮಿ ಮತ್ತು ಡಿ.ಕೆ ಬ್ರದರ್ಸ್ ಗೆಲ್ಲಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದರೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನಿಗೆ ತನ್ನ ಪಟ್ಟ ಉಳಿಸಿಕೊಳ್ಳಲು ಈ ಚುನಾವಣೆಯನ್ನು ಗೆಲ್ಲಲೇ ಬೇಕಾದ ಪರಿಸ್ಥಿತಿ ಎದುರಾಗಿದೆ.
ಬೈ ಎಲೆಕ್ಷನ್ ನಲ್ಲಿ ಇಬ್ಬರು ಯುವ ನಾಯಕರ ರಾಜಕೀಯ ಭವಿಷ್ಯಕ್ಕಾಗಿ ಪೈಟ್ ನಡೆಸುತ್ತಿದ್ದು. ಒಂದೆಡೆ ನಿಖಿಲ್ ಕುಮಾರಸ್ವಾಮಿ, ಅಳಿವು ಉಳಿವಿನ ಫೈಟ್ ನಡೆಸುತ್ತಿದ್ದರೆ. ಮತ್ತೊಂದೆಡೆ ಬಿ. ವೈ ವಿಜಯೇಂದ್ರಗೆ ರಾಜ್ಯಾದ್ಯಕ್ಷ ಪಟ್ಟ ಗಟ್ಟಿಯಾಗಿಸಲು ಹೋರಾಟ ನಡೆಸುತ್ತಿದ್ದಾರೆ. ಹೇಗಾದರೂ ಮೂರು ಕ್ಷೇತ್ರಗಳನ್ನು ಗೆಲ್ಲಲೇ ಬೇಕದ ಅನಿವಾರ್ಯತೆಗೆ ಸಿಲುಕಿರುವ ವಿಜಯೇಂದ್ರನಿಗೆ ಸ್ವಪಕ್ಷದವರೆ ಮಗ್ಗುಲು ಮುಳ್ಳಾಗಿ ಪರಿಣಮಿಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ರಾಜಕೀಯ ವರ್ಚಸ್ಸು ಉಳಿಸಿಕೊಳ್ಳಲು ಯುವ ನಾಯಕರ ಹೋರಾಟ ನಡೆಸುತ್ತಿದ್ದಾರೆ. ಸತತ ಸೋಲಿನಿಂದ ಹೊರ ಬರಲು ಮೂರನೇ ಬಾರಿಗೆ ಸ್ಪರ್ಧೆಗೆ ಇಳಿದಿರುವ ನಿಖಿಲ್ಗೆ ಈ ಚುನಾವಣೆಯನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಮತ್ತೊಂದಡೆ ಬಿಜೆಪಿಯಲ್ಲಿ ಅಧ್ಯಕ್ಷರ ಬದಲಾವಣೆ ಕೂಗು ಕೇಳಿ ಬಂದಿರುವ ಹಿನ್ನೆಲೆ ವಿಜಯೇಂದ್ರಗು ತಾನು ಸಮರ್ಥನೆಂದು ಸಾಬೀತು ಪಡೆಸಿಕೊಳ್ಳಲು ಈ ಚುನಾವಣೆ ಗೆಲ್ಲುವುದು ಅನಿವಾರ್ಯವಾಗಿದೆ.