ಬೆಂಗಳೂರು : ಸಾಲು,ಸಾಲು ಹಬ್ಬಗಳ ಜೊತೆಗೆ ಬೆಂಗಳೂರಿನಲ್ಲಿ ಬಿದ್ದ ಮಳೆಯ ಎಫೆಕ್ಟ್ನಿಂದಾಗಿ ನಮ್ಮ ಮೆಟ್ರೋದಲ್ಲಿ ದಾಖಲೆಯ ಜನರು ಸಂಚಾರ ಮಾಡಿದ್ದು. ಇದರಿಂದಾಗಿ ಸುಮಾರು 48 ಕೋಟಿಯಷ್ಟು ಆದಾಯ ಹರಿದು ಬಂದಿದೆ ಎಂದು ಮಾಹಿತಿ ದೊರೆತಿದೆ.
ನಗರದಲ್ಲಿ ಸುರಿದ ಮಳೆ ಎಫೆಕ್ಟ್ನಿಂದಾಗಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರೀ ಹೆಚ್ಚಳವಾಗಿದ್ದು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. 2023 ರ ಅ.1 ರಿಂದ ಅ. 24 ರವರೆಗೆ 1.52 ಕೋಟಿ ಜನರು ಮೆಟ್ರೊದಲ್ಲಿ ಪ್ರಯಾಣಿಸಿದ್ದರು. ಆದರೆ 2024 ರ ಅಕ್ಟೋಬರ್ ನಲ್ಲಿ 1.85 ಕೋಟಿ ಜನರು ಮೆಟ್ರೊ ಬಳಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ಮೆಟ್ರೋದಲ್ಲಿ 32.90 ಲಕ್ಷ ಜನರು ಹೆಚ್ಚಾಗಿ ಪ್ರಯಾಣಿಸಿದ್ದಾರೆ. ಅತಿ ಹೆಚ್ಚು ಪ್ರಯಾಣಿಕರು ಮೆಜೆಸ್ಟಿಕ್ ಮೆಟ್ರೊ ನಿಲ್ದಾಣವನ್ನು ಬಳಸಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಮೆಟ್ರೋ ಆದಾಯದಲ್ಲೂ ಬಾರೀ ಏರಿಕೆ ಕಂಡು ಬಂದಿದೆ. 2023ನೇ ಇಸವಿಯ ಅಕ್ಟೋಬರ್ ತಿಂಗಳ ಮೊದಲ 24 ದಿನಗಳಲ್ಲಿ 39.12 ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷ 48.35 ಕೋಟಿ ರೂ. ಹಣ ಪ್ರಯಾಣಿಕರ ಟಿಕೆಟ್ ಮೂಲಕ ಮೆಟ್ರೊಗೆ ಆದಾಯ ಬಂದಿದ್ದು ಕಳೆದ ವರ್ಷಕ್ಕೆ ಹೋಲಿಸಿದ್ರೆ 9.22 ಕೋಟಿ ರೂ. ಹೆಚ್ಚಿನ ಆದಾಯ ಬಂದಿದೆಬ ಎಂಬ ಮಾಹಿತಿ ದೊರತಿದೆ.