Monday, December 23, 2024

ಡೀಸಲ್​ ಬಸ್​ಗೆ ಆ್ಯಸಿಡ್​ ಹಾಕಿ​ ಓಡಿಸಲು ಮುಂದಾದ ಚಿಗರಿ ಬಸ್​ ಸಿಬ್ಬಂದಿಗಳು

ಹುಬ್ಬಳ್ಳಿ : ಡೀಸಲ್​ ಖಾಲಿಯಾಗಿ ರಸ್ತೆ ಮಧ್ಯೆ ನಿಂತುಹೋಗಿದ್ದ ಚಿಗರಿ ಬಸ್​ಗೆ ಆ್ಯಸಿಡ್​ ಸುರಿದ ಘಟನೆ  ಹುಬ್ಬಳ್ಳಿಯಲ್ಲಿ ನಡೆದಿದ್ದು. ಆ್ಯಸಿಡ್​ ಹಕಿದ ಕೆಲವೆ ನಿಮಿಷದಲ್ಲಿನ ಕೋಟ್ಯಾಂತರ ಮೌಲ್ಯದ ಚಿಗರಿ ಬಸ್​ ಇಂಜಿನ್​ ಸೀಜ್​ ಆಗಿದೆ.

ಕೆಲವೊಮ್ಮೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ಬಾರೀ ನಷ್ಟವನ್ನು ಉಂಟು ಮಾಡುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡದ ನಡುವೆ ಸಂಚಾರ ಮಾಡುವ 3462 ನಂಬರಿನ ಚಿಗರಿ ಬಸ್​ವೊಂದು ಡೀಸಲ್​​ ಖಾಲಿಯಾಗಿ ರಸ್ತೆ ಮಧ್ಯೆ ನಿಂತು ಹೋಗಿತ್ತು. ರಸ್ತೆಮಧ್ಯೆ ನಿಂತಿದ್ದ ಬಸ್​ಗೆ ಡೀಸೆಲ್​ ತೆಗೆದುಕೊಂಡು ಹೋಗುವಂತೆ ಸಿಬ್ಬಂದಿಗಳಿಗೆ ಮೇಲಾಧಿಕಾರಿಗಳು ಸೂಚನೆ  ನೀಡಿದ್ದರು.

ಮೇಲಾಧಿಕಾರಿಗಳ ಸೂಚನೆಯಂತೆ ಸಿಬ್ಬಂದಿಗಳು ತರಾತುರಿಯಲ್ಲಿ ಡೀಸೆಲ್​ ಬದಲು ಆ್ಯಸಿಡ್​ ತುಂಬಿದ್ದ ಕ್ಯಾನ್​ ತೆಗೆದುಕೊಂಡು ಹೋಗಿದ್ದ ಸಿಬ್ಬಂದಿಗಳು ಬಸ್​ನ ಡೀಸೆಲ್​ ಟ್ಯಾಂಕ್​ಗೆ ಆ್ಯಸಿಡ್ ತುಂಬಿಸಿದ್ದರು. ಇದಾದ ನಂತರ ಬಸ್​ ಚಾಲಕ ಬಸ್​ ಅನ್ನು ಸ್ಟ್ರಾಟ್​ ಮಾಡಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಬಸ್​ನ ಇಂಜಿನ್​ ಸುಟ್ಟಿಹೋಗಿದ್ದು ಇಂಜಿನ್ ಸೀಜ್​ ಆಗಿದೆ. ಇದರಿಂದಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಬಸ್​ ಹಾಳಾಗಿದೆ.

ತಪ್ಪಿದ ಭಾರೀ ದುರಂತ ?

ಒಂದು ವೇಳೆ ಬಸ್​​ನಲ್ಲಿದ್ದ ಡೀಸೆಲ್​ ಜೊತೆಗೆ ಆ್ಯಸಿಡ್​ ಸೇರಿ ರಿಯಾಕ್ಷನ್​ ಆಗಿದ್ದರೆ ಬಸ್​ ಇಂಜಿನ್​ ಸ್ಪೋಟಗೊಂಡು ಬಾರೀ ಪ್ರಮಾಣದ ಹಾನಿಯಾಗುತ್ತಿತ್ತು. ಆದರೆ ಇದಾಗದೆ ಬಸ್​ ಇಂಜಿನ್​ ಸೀಜ್​ ಆಗಿರುವುದರಿಂದಾಗಿ ಭಾರೀ ಪ್ರಮಾಣದ ಅನಾಹುತ ತಪ್ಪಿದಂತಾಗಿದೆ.

RELATED ARTICLES

Related Articles

TRENDING ARTICLES