ಪುಣೆ : ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಎರಡನೇ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಕಳೆದ 12 ವರ್ಷಗಳ ನಂತರ ಭಾರತ ತಂಡ ತವರಿನಲ್ಲಿ ಟೆಸ್ಟ್ ಸರಣಿಯನ್ನು ಸೋತಿದ್ದು. ಇನ್ನು ಒಂದು ಪಂದ್ಯ ಬಾಕಿ ಇರುವಾಗಲೆ ನ್ಯೂಜಿಲ್ಯಾಂಡ್ ತಂಡ 0-2 ಅಂತರದಲ್ಲಿ ಸರಣಿ ವಷ ಪಡಿಸಿಕೊಂಡಿದೆ.
ಎರಡನೇ ಇನಿಂಗ್ಸ್ನಲ್ಲಿಯು ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ 245 ರನ್ಗಳಿಗೆ ಸರ್ವಪತನಗೊಂಡಿತು. ಇದರಿಂದಾಗಿ ಆತೀಥೆಯ ನ್ಯೂಜಿಲ್ಯಾಂಡ್ ತಂಡ 113 ರನ್ಗಳ ಭರ್ಜರಿ ಜಯ ದಾಖಲಿಸಿತು.
ಪಂದ್ಯ ಗೆಲ್ಲಲು 353 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆರಂಭಿಕರಾದ ರೋಹಿತ್ ಶರ್ಮ (08) ವಿಕೆಟ್ ಕಳೆದುಕೊಂಡು ಆರಂಭಿಕ ನಿರಾಸೆ ಅನುಭವಿಸಿತು. ನಾಯಕನ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದ ಭಾರತ ತಂಡಕ್ಕೆ ಯುವ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್ (77) ಮತ್ತು ಶುಭಮನ್ ಗಿಲ್ (23) ಕೆಲಕಾಲ ಸ್ಕ್ರೀಸ್ನಲ್ಲಿ ನಿಂತು ತಂಡಕ್ಕೆ ಆಸರೆ ನೀಡಿದರು. ಇವರಿಬ್ಬರ ವಿಕೆಟ್ ಕಳೆದುಕೊಂಡ ನಂತರ ಉಳಿದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಆಲ್ರೌಂಡರ್ ರವೀಂದ್ರ ಜಡೇಜ (42) ರನ್ಗಳಿಸಿ ಕೆಲಕಾಲ ಗೆಲುವಿನ ಆಸೆಯನ್ನು ಚಿಗುರಿಸಿದರು. ಆದರೆ ಇವರು ಟೀಮ್ ಸೌತಿಗೆ ವಿಕೆಟ್ ಒಪ್ಪಿಸಿದರು.
ನ್ಯೂಜಿಲ್ಯಾಂಡ್ ಪರ ಮಿಚೆಲ್ ಸ್ಯಾಂಟ್ನರ್ 6 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ಯಾಂಟಿಗ್ ಮತ್ತು ಬೌಲಿಂಗ್ನಲ್ಲಿ ಸಂಘಟಿತ ಪ್ರದರ್ಶನ ತೋರಿದ ನ್ಯೂಜಿಲ್ಯಾಂಡ್ ತಂಡ ಅಮೋಘ ಜಯ ದಾಖಳಿಸಿತು.