ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಹತ್ತಿರವಾಗುತ್ತಿದೆ. ದೀಪಾವಳಿ ಎಂಬುದು ಸಂಭ್ರಮದ ಹಬ್ಬ, ಮನೆ, ಮನಗಳನ್ನು ಬೆಳಗಿಸುವ ಹಬ್ಬ, ದೀಪಾವಳಿ ಬಂತೆದರೆ ಸಾಕು ಎಲ್ಲಡೆ ಪಟಾಕಿಗಳ ಸದ್ದು ಹೆಚ್ಚಾಗುತ್ತದೆ. ಬಣ್ಣ ಬಣ್ಣ ಚಿತ್ತಾರಗಳನ್ನು ಬಿಡಿಸುವ, ಢಂ, ಢಮಾರ್ ಎಂದು ಸದ್ದು ಮಾಡುವ ಪಟಾಕಿಗಳೆಂದರೆ ಎಂತವರಿಗು ಇಷ್ಟವಾಗುವ ವಸ್ತುಗಳು. ಆದರೆ ಈ ಪಟಾಕಿಗಳನ್ನು ಹಚ್ಚಲು ಈ ಬಾರಿ ಸರ್ಕಾರ ಗೈಡ್ಲೈನ್ಸ್ ತಂದಿದ್ದು. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು ಎಂದು ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ಗೈಡ್ಲೈನ್ಸ್ನಂತೆ ದೀಪಾವಳಿ ಆಚರಣೆ ಮಾಡಿ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು. ರಾಜ್ಯದಲ್ಲಿ ದೀಪಾವಳಿಗೆ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾತ್ರಿ 8 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಹಚ್ಚಲು ಅವಕಾಶ ನೀಡಲಾಗಿದ್ದು. ಸುರಕ್ಷಿತ ಸ್ಥಳದಲ್ಲಿ ಪಟಾಕಿ ದಾಸ್ತಾನು ಮಾಡುವಂತೆ ತಿಳಿಸಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಬೇಕು
ಯಾವುದೇ ಕಾರಣಕ್ಕೂ ಪರಿಸರಕ್ಕೆ ಧಕ್ಕೆಯಾಗಬಾರದು ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.