Monday, December 23, 2024

ಖಾಸಗಿ ಬಸ್​ಗೆ ಬೆಂಕಿ : ಓರ್ವ ಪ್ರಯಾಣಿಕ ಸಜೀವ ದಹನ

ಕೊಲ್ಲಾಪುರ : ಮಹರಾಷ್ಟ್ರದ ಕೊಲ್ಲಾಪುರದಲ್ಲಿ ಖಾಸಗಿ ಬಸ್​ಗೆ ಬೆಂಕಿ ಹೊತ್ತಿಕೊಂಡು ಒಬ್ಬ ವ್ಯಕ್ತಿ ಜೀವಂತವಾಗಿ ಸುಟ್ಟು ಭಸ್ಮವಾಗಿದ್ದು. ಉಳಿದ 6 ಪ್ರಯಾಣಿಕರು ಯಾವುದೇ ಆಪಾಯವಾಗದೆ ಪಾರಾಗಿದ್ದಾರೆ.

ಬೆಳಗಾವಿಯಿಂದ ಪುಣೆ ತೆರಳುತ್ತಿದ ಖಾಸಗಿ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು. ಮಹಾರಾಷ್ಟ್ರದ ಕೊಲ್ಲಾಪೂರ ಪಟ್ಟಣದ ಹೊರವಲಯದ ಗೋಕುಲಶಿರಗಾಂವ ಗ್ರಾಮದ ಬಳಿ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್ಸಿನಲ್ಲಿದ್ದ 6 ಪ್ರಯಾಣಿಕರು ಕೆಳಗೆ ಇಳಿದಿದ್ದು. ನಿದ್ರಾವಸ್ಥೆಯಲ್ಲಿದ್ದ ಓರ್ವ ವ್ಯಕ್ತಿ ಕೆಳಗಿಳಿಯಲಾಗದೆ ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿಯ ಬಗ್ಗೆ ಯಾವುದೇ ಕುರುಹುಗಳು ದೊರೆಯದೆ ಇರುವುದರಿಂದ ಆ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಹಚ್ಚಲು ಪೋಲಿಸರು ಮುಂದಾಗಿದ್ದಾರೆ. ಪ್ರಸ್ತುತ ಗೋಕುಲ ಶಿರಗಾಂವ ಪಟ್ಟಣ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES