ಬೆಂಗಳೂರು : ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಹಿನ್ನಲೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಾನುಒಂದು 15 ಭಾರಿ ಚನ್ನಪಟ್ಟಣಕ್ಕೆ ಭೇಟಿ ಕೊಟ್ಟಿದ್ದೇನೆ. ನಮ್ಮ ಸಿದ್ದಾಂತ ಒಪ್ಪಕೊಂಡು ಬಿಜೆಪಿ ದಳ ದಿಂದ ಹಲವು ಜನ ಕಾಂಗ್ರೆಸ್ ಗೆ ಬಂದಿದ್ದಾರೆ. ಅವರಿಗೆಲ್ಲರಿಗೂ ವಿಶ್ವಾಸ ಕೊಡುತ್ತಿದ್ದೇವೆ
ನಾನು ನಮ್ಮೆಲ್ಲ ನಾಯಕರು ನಿಮ್ಮನ್ನ ಉತ್ತುಂಗಕ್ಕೆ ಒಯ್ಯುವಂತ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದೇ ಮಾತನ್ನು ಸಿ.ಪಿ ಯೋಗೇಶ್ವರ್ ಅವರಿಗೂ ಹೇಳಿದ್ದೇವೆ. ಅವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಸಿಪಿವೈ ಸೇರಿದಂತೆ ಇನ್ನು ಒಂದು ಹೆಸರು ಕಳಿಸ್ತಿನಿ. ನಮಗೆ ಎಲ್ಲಕಿಂತ ಹೆಚ್ಚಾಗಿ ಪಕ್ಷದ ಹಿತ ಮುಖ್ಯ.ನಾನು ಇಲ್ಲಾ ಅಂದ್ರು ಕಾಂಗ್ರೆಸ್ ಇರುತ್ತೆ ಎಂದು ಹೇಳಿದರು.
ಯೋಗಿಶ್ವರ್ ನಿಂದ ಪಕ್ಷಕ್ಕೆ ಒಳ್ಳೆದು ಆಗುತ್ತೆ ಅಂತಾ ಕಾರ್ಯಕರ್ತರು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರದ ಜೊತೆ ಕೈ ಜೋಡಿಸಬೇಕಂತ ಶುಭದಿನ ಲಗ್ನ ನೋಡಿಕೊಂಡು ಬಂದಿದ್ದಾರೆ. ಇದು ಐತಿಹಾಸಿಕವಾದ ಘಟನೆ
ಚನ್ನಪಟ್ಟಣದಲ್ಲಿ ಗೆಲ್ಲುವ ವಿಶ್ವಾಸ ಇದೆಯ ಎಂಬ ವಿಚಾರಕ್ಕೆ ಮಾತನಾಡದ ಡಿ.ಕೆ, ನಾವು ಕೇವಲ ಚನ್ನಪಟ್ಟಣವನ್ನಲ್ಲ,ಮೂರು ಕ್ಷೇತ್ರಗಳಲ್ಲಿ ಗೆಲ್ಲುತ್ತಿವಿ. ಡಿಕೆ ಸುರೇಶ್ ಸೋಲಿಸಿದವರನ್ನ ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದಿರಾ ಎಂಬ ವಿಚಾರಕ್ಕೆ ಮಾತನಾಡಿದ ಡಿ,ಕೆ ಎಲ್ಲರನ್ನ ಕರೆದು ಮಾತಾಡಿದ್ದೇನೆ.
ರಾಜಕೀಯ ಭಿನ್ನಾಭಿಪ್ರಾಯ ಇದ್ದರು ಗೆಲುವು ಬೇಕು ಎಂಬ ದೃಷ್ಟಿಯಿಂದ ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿದರು.