Tuesday, October 22, 2024

ಜೆಡಿಎಸ್ ಚಿಹ್ನೆಯಲ್ಲಿ ನಿಲ್ತಿನಿ ಎಂದು ಉಲ್ಟಾ ಹೊಡೆದ್ರ ಸಿಪಿವೈ.?

ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆ ದಿನದಿಂದ ದಿನಕ್ಕೆ ಬಿಸಿ ಪಡೆಯುತ್ತಿದ್ದು. ಯೋಗೇಶ್ವರ್ ಯಾವ ಪಕ್ಷದಿಂದ ಸ್ಪರ್ದೆ ಮಾಡುತ್ತಾರೆ ಎಂಬದು ಕುತೂಹಲ ಮೂಡಿಸಿದೆ. ಇದರ ನಡುವೆ ಮಳವಳ್ಳಿ ಮಾಜಿ ಶಾಸಕ ಅನ್ನದಾನಿ ಹೊಸ ಬಾಂಬ್ ಸಿಡಿಸಿದ್ದಾರೆ.

ಮೊನ್ನೆ ಸಂಜೆ ಬೆಂಗಳೂರಿನ ಎಟ್ರಿಯಾ ಹೋಟೆಲ್ ನಡೆದಿದ್ದ ಜೆಡಿಎಸ್ ಮತ್ತು ಸಿಪಿವೈ ಸಭೆಯಲ್ಲಿ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಲು ಸಿಪಿವೈ ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು ಚನ್ನಪಟ್ಟಣ ಜೆಡಿಎಸ್ ನ ಭದ್ರಕೋಟೆ.2019-20 ರಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಿ ಆಯ್ಕೆಯಾಗಿದ್ದರು.ಮುಖ್ಯಮಂತ್ರಿ ಕೂಡ ಆಗಿ ಸಾವಿರಾರು ಕೋಟಿ ಅನುದಾನ ತಂದು ಚನ್ನಪಟ್ಟಣ ಅಭಿವೃದ್ಧಿ ಮಾಡಿದ್ದಾರೆ. ಆ ಭಾಗಕ್ಕೆ ಇಗ್ಗಲೂರು ಅಣೆಕಟ್ಟು ನಿರ್ಮಾಣ ಮಾಡಿ ನೀರು ಕೊಟ್ಟ ಭಗೀರಥ ಎಂದು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಯಶಸ್ವಿಯಾಗಿ ಜೆಡಿಎಸ್ ಗೆಲ್ಲುವ ವಿಶ್ವಾಸ ಇದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಚಿಹ್ನೆ ಯಲ್ಲಿ ಸ್ಪರ್ಧೆ ಖಚಿತವಾಗಿದೆ. ಮಾಗಡಿ ಮಂಜು, ಎ.ಮಂಜು, ಪುಟ್ಟರಾಜು ಎಲ್ಲಾರು ಎಟ್ರಿಯಾದಲ್ಲಿ ಸಭೆ ಮಾಡಿದ್ವಿ. ನಮ್ಮ ವರಿಷ್ಠರ ಆದೇಶದ ಮೆರೆಗೆ ಯೋಗೇಶ್ವರ್ ಜೊತೆ ಚರ್ಚೆ ಮಾಡಿದ್ದೇವೆ ನಮ್ಮ ಪಕ್ಷದಿಂದ ನಿಲ್ಲುವ ಸೂಚನೆ ಕೊಟ್ಟಿದ್ದರು. ಆದರೆ ಬಳಿಕ ಯೋಗೇಶ್ವರ್ ಅವರು ಎರಡು ದಿನ ಬಿಟ್ಟು ಉಲ್ಟಾ ಹೊಡೆದಿದ್ದಾರೆ
ಇದು ಯಾವ ನಿಲುವು ಅಂತ ಅರ್ಥವಾಗಿಲ್ಲ ಎಂದು ಸಿಪಿವೈ ನಡೆಗೆ ಆಶ್ಚರ್ಯ ವ್ಯಕ್ತ ಪಡಿಸಿದರು.

ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಅಂತ ಅವರಿಗೆ ಸ್ಪಷ್ಟತೆ ಇಲ್ಲ.ಅವರಲ್ಲೆ ಒಂಥರ ದ್ವಂದ್ವ ನಿಲುವು ಇದೆ ಆದರೆ ಯೋಗೇಶ್ವರ್ ನಿಲುವು ಸರಿ ಇಲ್ಲ.ನಾವೇ ನಮ್ಮ ಪಾರ್ಟಿಯಿಂದ ಆಫರ್ ಕೊಟ್ಟಿದ್ದೇವೆ. ತನು,ಮನ, ಧನ ಕೊಟ್ಟು ನಿಲ್ಲಿಸುವ ಆಫರ್ ಕೊಟ್ಟಿದ್ವಿ.ಅದಕ್ಕೂ ಅವರು ಒಪ್ಪಿಲ್ಲ, ಅವರ ಮನಸ್ಸು ಚಂಚಲ.ಎಲ್ಲಿ ನಿಲ್ಲಬೇಕು ಅವರಿಗೆ ಗೊತ್ತಿಲ್ಲ.ಆ ಪರಿಸ್ಥಿತಿ ನಿರ್ಮಾಣಕ್ಕೆ ಅವರೇ ಕಾರಣ.ಯಾರೇ ನಿಂತರು, ನಿಲ್ಲದಿದ್ದರು ನಮ್ಮ ಪಕ್ಷ, ಚಿಹ್ನೆಯಲ್ಲಿ ಹೋರಾಟ ಮಾಡ್ತೇವೆ.ಚನ್ನಪಟ್ಟಣ ಕ್ಷೇತ್ರದಲ್ಲಿ ದೇವೇಗೌಡ್ರು ರನ್ನ ನೆನೆಸುತ್ತಾರೆ. ಎಂದು ಹೇಳಿದರು

ಏನೇ ಆದರು ಚನ್ನಪಟ್ಟಣ ಗೆದ್ದೆ ಗೆಲ್ತೇವೆ. ಯೋಗೇಶ್ವರ್ ಜೊತೆ ಕಾಂಗ್ರೆಸ್ ಸಂಪರ್ಕದ ವಿಚಾರ ಅದು ನಮಗೆ ಗೊತ್ತಿಲ್ಲ. ಅದರ ಬಗ್ಗೆ ನಮ್ಮ ಕುಮಾರಣ್ಣ ಸ್ಪಷ್ಟತೆ ಕೊಟ್ಟಿದ್ದಾರೆ.ಯೋಗೇಶ್ವರ್ ಗೆ NDA ಮೇಲೆ ನಂಬಿಕೆ ಇಲ್ಲ
ಮಂಜುನಾಥ್ ಅವರನ್ನು ಬಿಜೆಪಿ ಚಿಹ್ನೆಯಲ್ಲಿ ನಾವು ನಿಲ್ಲಿಸಿದ್ವಿ. ಅವರು ನಿಲ್ಲಲ್ಲ ಅಂದಿದ್ರು ಕುಮಾರಸ್ವಾಮಿ ಮನವೋಲಿಸಿ ನಿಲ್ಲಿಸಿದ್ರು.
ಆದರೆ ಈಗ ಯೋಗೇಶ್ವರ್​ಗೆ  ಜೆಡಿಎಸ್ ಚಿಹ್ನೆಯಲ್ಲಿ ನಿಲ್ಲಲ್ಲು ಆಫರ್ ಕೊಟ್ಟಿದ್ದೇವೆ. ನಾವೆಲ್ಲ ದುಡಿದು ಗೆಲ್ಲಿಸುತ್ತೇವೆ ಇವರಿಗೆ ಗೊಂದಲ ಯಾಕೆ? ಮಂತ್ರಿಯಾಗಿದ್ದ ಯೋಗೇಶ್ವರ್ ಸ್ಪಷ್ಟತೆ ಇಟ್ಟುಕೊಳ್ಳುಬೇಕು.
NDA ಯಿಂದ ಮನವೋಲಿಸಬೇಕು ಕುಮಾರಣ್ಣ ತೀರ್ಮಾನ ಮಾಡ್ತಾರೆ.

ಯೋಗೇಶ್ವರ್ ಬರದೆ ಇದ್ದರೆ ನಮ್ಮ ಪಕ್ಷದ ಚಿಹ್ನೆಯಿಂದ ಅಭ್ಯರ್ಥಿ ನಿಲ್ಲಿಸ್ತೇವೆ.ಚನ್ನಪಟ್ಟಣದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆಗುತ್ತಾರೆ ಅವರು ಮುಂದಿನ ಭವಿಷ್ಯದ ನಾಯಕರು ಅವರು ನಿಲ್ಲಬೇಕು ಎಂದು ಕಾರ್ಯಕರ್ತರಲ್ಲಿ, ಚನ್ನಪಟ್ಟಣ ಜನತೆಯ ಒತ್ತಡ ಹಾಕುತ್ತಿದ್ದಾರೆ  ಎಂದು ಅನ್ನದಾನಿ ತಿಳಿಸಿದರು.

RELATED ARTICLES

Related Articles

TRENDING ARTICLES